About Me Kannada


Abhishek_Iyengar

ಅಭಿಷೇಕ್ ಅಯ್ಯಂಗಾರ್

ಬರಹಗಾರ, ನಾಟಕಕಾರ ಹಾಗು ನಿರ್ದೇಶಕ

ರಾಯಭಾರಿ, ವಿಶ್ವ ರಂಗಭೂಮಿ ನಕ್ಷೆ, ಅಮೆರಿಕಾದ ಬಾಸ್ಟನ್ನಿನಲ್ಲಿರುವ ಎಮರ್ಸನ್ ಕಾಲೇಜು

ವೃತ್ತಿ  ‘Engineer’  ಪ್ರವೃತಿ ರಂಗಭೂಮಿ.

೨೦೦೬ ಇಸಿವಿನಲ್ಲಿ ಕೇವಲ ನಾಲ್ಕು ಜನ ಸ್ನೇಹಿತರು ಸೇರಿ ಸ್ಥಾಪಿಸಿದ್ದ ರಂಗ ತಂಡ “ವಿಮೂವ್ ಥೀಯೇಟರ್ “

ಪ್ರಾರಂಭದಲ್ಲಿ ಎಲ್ಲರೂ ‘Software’ ಉದ್ಯೋಗಿಗಳಾದ್ದರಿಂದ ತಂಡದ ಖರ್ಚು ವ್ಯಚ್ಛೆ ನಮ್ಮ ಕೈ ಇಂದಲೇ ಹಾಕಿದೆವು. ಮೊದಲ ಎರೆಡು ವರ್ಷದಲ್ಲಿ ೩ ನಾಟಕಗಳನ್ನು ಪ್ರದರ್ಶಿಸಿದವು. ಪ್ರದರ್ಶನ ಯಶಸ್ವಿಯಾಗಿದ್ದರೂ ನಿರೀಕ್ಷಿಸಿದ ಮಟ್ಟಕೆ ಫಲ ಕೊಡಲ್ಲಿಲ, ಹಾಗಾಗಿ ತಂಡದಲ್ಲಿ ಇದ್ದ ಕೆಲವು ಸ್ನೇಹಿತರು ಸಂಸ್ಥೆಯನ್ನು ತ್ಯಜಿಸಿದರು.

ಹಠಬಿಡದೆ ಯಶಸ್ಸನ್ನು ಕಾಣಲು ಮತ್ತೆ ಕನ್ನಡ ನಾಟಕಗಳನ್ನು ಬರೆದು ಪ್ರದರ್ಶಿಸಿದೆವು. ರಚನೆ ನಿರ್ದೇಶನ ಎಲ್ಲವೂ ನನ್ನದಾಗಿತ್ತು. ಸದಸ್ಯರುಗಳು ಏನು ಸಂಭಾವನೆ ಪಡೆಯದೆ ಸಂಸ್ಥೆಗೆ ದುಡಿದರು.

ಪರಿಣಾಮ ಇಂದು ವಿಮೂವ್ ತಂಡ ಒಟ್ಟು, ೧೫ ನಾಟಕಗಳು, ೧೮೦ ಪ್ರದರ್ಶನಗಳನ್ನು ಮಾಡಿದ್ದೂ,” ಭಾರತದ ಪ್ರಖ್ಯಾತ ರಂಗತಂಡಗಳಲ್ಲಿ ಒಂದು” ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಜನರ ಅತ್ಯಂತ ಪ್ರೀತಿಯ ರಂಗ ತಂಡ ಎಂದೇ ಹೆಸರುವಾಸಿಯಾಗಿದೆ.

ಕನ್ನಡ ರಂಗಭೂಮಿಯಲ್ಲಿ ಆಧುನಿಕ ಜೀವನಶೈಲಿ, ನವಯುಗದ ಕಥೆಯನ್ನು ನಾಟಕ ರೂಪದಲ್ಲಿ ಜನರ ಮುಂದಿಡುವ ಪ್ರಯತ್ನವನ್ನು ಮಾಡುತ್ತಿರುವ ಕೆಲವೇ ಕಲವು ತಂಡಗಳಲ್ಲಿ ನಮ್ಮ ತಂಡವು ಮುಂಚೂಣಿಯಲ್ಲಿದೆ ಎಂಬುದು ನನಗೆ ಹೆಮ್ಮೆಯ ವಿಷಯ.

ಅಮೇರಿಕಾದ Ashfield ನ ಸುಮಾರು ೩೦ ವರ್ಷಗಳಷ್ಟು ಹಳೆಯದಾದ, ಡಬಲ್ ಎಡ್ಜ್ ಥಿಯೇಟರ್ ಎನ್ನುವ ನಾಟಕ ಸಂಸ್ಥೆಯು, ಪ್ರತಿವರ್ಷ ಸುಮಾರು ನಾಟಕರಂಗದಲ್ಲಿರುವ ಸುಮಾರು ೨೦-೨೫ ಜನರನ್ನು ಆಯ್ದು ಕಠಿಣ ರಂಗ ತರಬೇತಿ ಶಿಬಿರವನ್ನು ನಡೆಸುತ್ತದೆ. ಜಗತ್ತಿನ ಮೂಲೆ ಮೂಲೆಯಿಂದ ಸಾವಿರಾರು ಜನರು ಈ ಶಿಬಿರಕ್ಕೆ ಪ್ರತಿವರ್ಷ ಅರ್ಜಿ ಸಲ್ಲಿಸುತ್ತಾರೆ. ಈ ವರ್ಷ ಡಬಲ್ ಎಡ್ಜ್ ಸಂಸ್ಥೆಯು ನನ್ನ ಅರ್ಜಿ ಮಾನ್ಯ ಮಾಡಿ Scholarship ಕೂಡ ಕೊಟ್ಟಿದಕ್ಕೆ, ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ನಾನು ಅಲ್ಲಿನ ತರಬೇತಿಯನ್ನು ಮುಗಿಸಿ ಬಂದಿದ್ದೇನೆ.

ಇತ್ತೀಚಿಗೆ ಅಮೆರಿಕಾದ ಬಾಸ್ಟನ್ನಿನಲ್ಲಿರುವ ಎಮರ್ಸನ್ ಕಾಲೇಜು, ತನ್ನ ವಿಶ್ವ ರಂಗಭೂಮಿ ನಕ್ಷೆ (World Theatre mapping) ಯೋಜನೆಗೆ, ಜಗತ್ತಿನ ಹಲವಾರು ರಂಗಕರ್ಮಿಗಳ ನಡುವೆ, ನನ್ನನ್ನು ಭಾರತದ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಈ ಯೋಜನೆಯ ರಾಯಭಾರಿಯಾಗಿ, ದೇಶ ವಿದೇಶಗಳ ನಡುವೆ ರಂಗಭೂಮಿಯನ್ನು ಬೆಸೆಯುವ ಸೇತುವೆಯಾಗಿ ಹಾಗು ವಿಶ್ವ ರಂಗ ಭೂಪಟವನ್ನು ರಚಿಸುವ ಕಾರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲಿದ್ದೇನೆ. ಇದರ ಮೂಲಕ ಪ್ರಪಂಚಾದ್ಯಂತ ರಂಗಭೂಮಿಯ, ರಂಗ ಕರ್ಮಿಗಳ ಸಾಂಸ್ಕೃತಿಕ ಸಂಘಟನಾತ್ಮಕ ಸಮುದಾಯವನ್ನು ಕಟ್ಟುವ ಗುರಿ ಹೊಂದಿದ್ದೇನೆ.

ಹಾಗೆಯೇ ಕ್ಯಾಲಿಫೋರ್ನಿಯಾದಲ್ಲಿರುವ ಅಮೇರಿಕನ್ನಡಿಗರು ಸೇರಿ ಹುಟ್ಟುಹಾಕಿದ, ’ನಾಟಕ ಚೈತ್ರ ಎಂಬ ರಂಗ ತಂಡದ ರೂವಾರಿಗಳು ಬೆಂಗಳೂರಿಗೆ ಬಂದಾಗ ನಮ್ಮ ನಾಟಕಗಳನ್ನು ನೋಡಿ ಸಂತಸ ಪಟ್ಟು ಅದನ್ನು ಅಮೇರಿಕಾದಲ್ಲಿ ಪ್ರದರ್ಶಿಸಬೇಕೆಂದು ಕೋರಿದ್ದರು. ಅದರಂತೆಯೇ ನಾನೇ ಬರೆದಿರುವ ಮಾಗಡಿ ಡೇಸ್ಎಂಬ ರಾಜಕೀಯ ವಿಡಂಬನೆಯ ಕನ್ನಡ ನಾಟಕವನ್ನು ನಾನು ಅಲ್ಲಿರುವ ಕನ್ನಡ ರಂಗಾಸಕ್ತರಿಗೆ ಕಲಿಸಿ ನಿರ್ದೇಶನ ಮಾಡಿದ್ದು, ನಾಟಕದ ಪ್ರದರ್ಶನ ಕಳೆದ ಫೆಬ್ರವರಿ ೧೧ ಮತ್ತು ೧೨ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆಯಿತು.

ನಾನು ಬರೆದು ನಿರ್ದೇಶಿಸಿದ ಕನ್ನಡ ನಾಟಕಗಳು:

೧. ನಮ್ಮ ಮೆಟ್ರೋ, ೨೦೧೦

ಬದಲಾಗುತ್ತಿರುವ ಬೆಂಗಳೂರಿನ ಒಂದು ನಾಟಕ “ನಮ್ಮ ಮೆಟ್ರೋ” ಒಂದು ಸಣ್ಣ ಊರು ಇದ್ದಿಕಿದಂಗೆ ಪ್ರಪಂಚದ ಅತಿ ಹೆಚ್ಚು ಬೇಕಾಗಿರುವ ನಗರವಾಗಿ ಬೆಳೆದಾಗ ಆಗುವ ಬದಲಾವಣೆಗಳನ್ನು ವ್ಯಕ್ತಪಡಿಸುವಂತ ನಾಟಕ ನಮ್ಮ ಮೆಟ್ರೋ. ನಮ್ಮ ಮೆಟ್ರೋ ಇದು ವರೆಗೂ ೨೪ ಕಕ್ಕೂ ಹೆಚ್ಚು ಸಲಿ ಪ್ರದರ್ಶನಗೊಂಡಿದೆ

೨. ಮಾಗಡಿ ಡೇಸ್, ೨೦೧೧- ೧೨

ಪ್ರಸ್ತುತ ರಾಜಕೀಯ ಸ್ಥಿಗತಿಯನ್ನು ಹೆಣೆದು ಬರೆದ ಹಾಸ್ಯಮಾಯ ನಾಟಕ ಮಾಗಡಿ ಡೇಸ್. ಮಾಗಡಿ ಡೇಸ್ ನಮ್ಮ ತಂಡದ ಅತಿ ಹೆಚ್ಚು ಪ್ರಸಿದ್ಧ ಹಾಗು ಜನಪ್ರಿಯ ನಾಟಕಗಳಲ್ಲಿ ಒಂದು. ೨೦೧೬ ನಲ್ಲಿ California ದ “Mission Center for Performing Arts” ರಂಗಮಂದಿರದಲ್ಲಿ ಪ್ರದರ್ಶನವಾಯ್ತು.

೩. ಈ = ಎಂ ಸಿ೨ (E=mc2), ೨೦೧೪

E =mc2 , ಎದು ಒಬ್ಬ ಸ್ಚಿಜೋಪ್ರೇನಿಕ್ ರಂಗಕಲಾವಿದನ ಸುತ್ತ ಹನೆದಿರುವ ಕಥೆಯಾಗಿದ್ದು , ಕಥೆಯಲ್ಲಿ ಬರುವ ವಿಭಿನ್ನ ಹಾಗು ತತ್ಕ್ಷಣಕ್ಕೆ ವಿಚಿತ್ರವೆನ್ನುವ ಪಾತ್ರಗಳು ನಾಟಕದ ಕಥೆಯನ್ನು ಹಾಗೂ ಪ್ರೇಕ್ಷಕರನ್ನು ಹಿಡಿದಿದುತ್ತವೆ. ಹಲವಾರು ರಂಗಭೂಮಿ ಗಣ್ಯರಿಂದ ಪ್ರಶಂಸೆ ಪಡೆದಿರುವ ಈ ನಾಟಕ ಸುಮಾರು ೨೫ ಯಶಸ್ವೀ ಪ್ರದರ್ಶನಗಳಾಗಿದೆ.

ನಾನು ಬರೆದ ನಾಟಕಗಳು:

೧. ಅನಾವರಣ, ೨೦೧೫-೨೦೧೬

ಇತ್ತೀಚಿನ ಅತಿ ಪ್ರಸಿದ್ಧ ಹಾವು ಜನಪ್ರಿಯ ನಾಟಕ ಅನಾವರಣ, ೬ ಸ್ನೇಹಿತರ ನಡುವೆ ನಡೆಯುವ ಕಥೆಯೇ ಅನಾವರಣ. ಇದಾಗಲೇ ೧೦ಕ್ಕೂ ಹೆಚ್ಚು ಪ್ರದರ್ಶನಗಳಾಗಿದ್ದು ಮುಂದೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ  ಹಾಗು ಇತರ ರಾಜ್ಯಗಳಲ್ಲೂ ಈ ನಾಟಕವನ್ನು ಪ್ರದರ್ಶಿಸುವ ಯೋಜನೆಗೆ ಸಜ್ಜಾಗಿದೆ.

೨. ಮಾಲ್ಗುಡಿ ಡೇಸ್, ೨೦೧೧-೨೦೧೨

ಖ್ಯಾತ ಬರಹಗಾರ ಅರ. ಕೆ ನಾರಾಯಣ ರವರ ಪುಸ್ತಕ ಆಧಾರಿತ ನಾಟಕ ಮಾಲ್ಗುಡಿ ಡೇಸ್. ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಮಾಲ್ಗುಡಿಯ ಕಥೆಗಳನ್ನು ವೇದಿಕೆಗೆ ತಂದ ಹಿರಿಮೆ ಈ ನಾಟಕದ್ದು. ಇದು ನಾನು ಬರೆದ ಮೊದಲ ಸಂಪೂರ್ಣ ನಾಟಕ. ಸುಮಾರು ೫೦ ಕ್ಕೂ ಹೆಚ್ಚು, ಚೆನೈ, ಹೈದೆರಾಬಾದ್, ಮೈಸೂರ್, ಪುಣೆ ಹೇಗೆ ಅನೇಕ ಕಡೆ ಪ್ರದರ್ಶನಗೊಂಡಿದೆ.

The plays Written & Directed in English are:

  1. S I Don’t Love You – 2013

A Romantic Comedy set in the suburbs of a city where a couple in Love plans their wedding and then decide to add a twist into their own fairy tale wedding thus adding more drama to the “Big Fat Indian Wedding” story.

  1. Cocktail (A play in English)- 2014

Cocktail is Collection of 8 Short stories based on the real-life stories of people in India. Each story depicts a different Emotion and Expression thus adding 8 different variations. The play is devised using the “Black-Box” concept.

ರಂಗಭೂಮಿಯಲ್ಲಿ ನನ್ನ ಸೇವೆಯನ್ನು ಗುರುತಿಸಿ ನಂಗೆ ದೊರಕಿದ ಮುಖ್ಯ ಪ್ರಶಸ್ತಿ ಹಾಗು ಸನ್ಮಾನಗಳು:

೧. ರಂಗಭೂಮಿಯ ಸೇವೆಗ್ಗಾಗಿ ೨೦೧೬ರಲ್ಲಿ Radio City 91.1 FM channel ರವರಿಂದ “ಹೆಮ್ಮೆಯ ಕನ್ನಡಿಗ” ಎಂಬ ಬಿರುದು.

೨. ೨೦೧೪ ರಾಲಿ ನಡೆದ ವಿಜಯ ಕರ್ನಾಟಕ ರಂಗಭೂಮಿ ಸ್ಪರ್ಧೆಯಲ್ಲಿ ನನ್ನ ನಾಟಕ “ಮೂರೂ ಹುಂಪುಗಳು” ಗೆ ಮೊದಲನೆಯ ಪ್ರಶಸ್ತಿ.

೩. ೨೦೧೨ ರಲ್ಲಿ ನಡೆದ Australia ದ Short & Sweet Theatre Festival ನಲ್ಲಿ “ಶ್ರೇಷ್ಠ ರಂಗತಂಡ” ಪ್ರಶಸ್ತಿ

೪. ೨೦೧೧೨ ರಲ್ಲಿ Deccan Herald Theatre Festival ನಲ್ಲಿ ನಾಟಕ P.S I Don’t Love you ಆಯ್ಕೆ

೫. ೨೦೧೭ ರಲ್ಲಿ ವಿಜಯನಗರ ಬಿಂಬ ನಾಟಕ ಸಂಸ್ಥೆಯಿಂದ “ವಿಶ್ವ ರಂಗಭೂಮಿ ದಿನದ ಸನ್ಮಾನ”