Ladies Tailor


 

೩೬, ೧೨, ೬.೫, ೧೦….
(ಒಂದು ಗಾಢ ಮೌನ…)
(ಬೆಳಕು ನಿಧಾನವಾಗಿ ವೇದಿಕೆ ಮೇಲೆ ಮೂಡಿ ಬರುತ್ತದೆ..)
(ಒಬ್ಬ ಪಾತ್ರಧಾರಿ ಬಿಳಿ ಅಂಗಿಯಲ್ಲಿ ಮುದುರಿ ಕೂತಿರುತ್ತಾನೆ)
(ಕಣ್ಣಲ್ಲಿ ನೀರು… ತಲೆಯೆತ್ತಿ ಪ್ರೇಕ್ಷಕರನ್ನು ಒಮ್ಮೆ ನೋಡಿ)

೩೬, ೧೨, ೬.೫, ೧೦….
(ಕಣ್ಣನ್ನು ಒರೆಸಿಕೊಂಡು)
ಅಮ್ಮ ತುಂಬಾ ಕಷ್ಟ ಪಟ್ಟು ಹೊಲಿಯೋದನ್ನ ಕಲ್ತಿದ್ಲು, Tailoring ಅನ್ನೋದು ಒಂದು ಕಲೆ ಅಂತ ಹೇಳೋಳು. ಅಮ್ಮ ಯಾವಾಗ್ಲೂ ಹೇಳ್ತಿದ್ದ ಒಂದು ಮಾತು ಇವತ್ತು ಜ್ಞಾಪಕ ಬರುತ್ತೆ..

“ಲೋ, ನೀನು ಹುಟ್ದಾಗ ನಮ್ಮ ಹತ್ತಿರ ಒಂದು ತೊಟ್ಲು ಕೂಡ ಇರ್ಲಿಲ್ಲ, ನಿನ್ನನ್ನ ಇದೇ Tailoring Machine ಮೇಲೆ ಮಲಗ್ಸಿ ಹಾಲ್ ಕುಡ್ಸ್ತ ಇದ್ದೆ , ಈ Tailoring Machine ಮೇಲೆ ಮಲಗ್ಸಿದ್ ಕೂಡ್ಲೇ ನೀನು ಅಳೋದ್ ನಿಲ್ಲಿಸ್ತಿದ್ದೆ..” ಅಂತ.

ಅಮ್ಮ ಸತ್ತಾಗ ನನಗೆ ಅಂತ ಬಿಟ್ಟೋದ ಒಂದೇ ಆಸ್ತಿ ಅಂದ್ರೆ, Tailoring Machine . ನಾನು ಡಿಗ್ರಿ ಮಾಡ್ಬೇಕು ಅನ್ನೋದು ಅಮ್ಮನ ಮನಸಲ್ಲಿ ಎಲ್ಲೊ ಒಂದು ಕಡೆ ಇತ್ತು ಆದ್ರೆ ಅಮ್ಮ, ನಾನು ಒಂದು ದೊಡ್ಡ ಲೇಡೀಸ್ Tailor ಆಗೋ ಕನಸನ್ನ ನನ್ನನ ಮೊದಲನೇ ಬಾರಿ Tailoring Machine ಮೇಲೆ ಮಲಗ್ಸಿದ್ದಾಗ್ಲೇ ನಿರ್ಧಾರ ಮಾಡಿದ್ಲು ಅನ್ಸುತ್ತೆ.

ನಾನು ಡಿಗ್ರಿ ಮಾಡ್ಲಿಲ್ಲ ಆದ್ರೆ ಲೇಡೀಸ್ Tailor ಅಂತೂ ಆದೆ (ಒಂದು ಸಣ್ಣ ನಗು)

“ಸೀರೆಗೆ ಫಸ್ಟು ಫಾಲ್ಸ್ ಹೊಲಿಯೋದನ್ನ ಕಲಿ, ಆಮೇಲೆ ಕಾಜ, ಒಂದೊಂದೇ ಕಲಿಬೇಕು” ಅಂತ ಹೇಳಿ ಸೀನ ನನ್ನ ಅಸಿಸ್ಟೆಂಟ್ ಆಗಿ ಸೇರಿಸ್ಕೊಂಡಿದ್ದ.
ಸೀನಂಗೆ ಸ್ವಲ್ಪ ವಯಸ್ಸಾಗಿತ್ತು, ಸೂಜಿಗೆ ದಾರ ಪೋಣಿಸೋಕ್ಕೆ ಆಗ್ತಿರ್ಲಿಲ್ಲ
“ಅಣ್ಣ ಪೋಣಿಸ್ಕೊಡ್ಲ ?” ಅಂತ ಕೇಳ್ದಾಗೆಲ್ಲ
“ಈ ಕೈ ನೀನು, ಈ ಸೂಜಿ ನಿನ್ನ ಜೀವನ, ಈ ಸೂಜಿಲಿ ಇರೋ ತೂತು ನಿನ್ನ ಯೋಚ್ನೆ, ಆ ದಾರ ಸಮಾಜ ಇದ್ದಂಗೆ, ಸಮಾಜ ಯಾವಾಗ್ಲೂ ನಿನ್ನ ಯೋಚ್ನೆ ಒಳಗೆ ತೂರೋದಕ್ಕೆ ಪ್ರಯತ್ನ ಪಡ್ತಾನೇ ಇರುತ್ತೆ, ಸೂಜಿನ ಗಟ್ಟಿಯಾಗಿ ನಿನ್ನ ಕೈಯಲ್ಲೇ ಹಿಡ್ದು ನಿಂಗೆ ಹೇಗೆ, ಎಷ್ಟು ಬೇಕೋ ಅಷ್ಟೇ ಪೋಣಿಸ್ಕೊಬೇಕು ಆಗ್ಲೇ ನಿನ್ನ ಜೀವನ ನಿನ್ನದಾಗಿರೋದು..”
ಅಂತ ತತ್ವ ಮಾತಾಡೋನು

‘ನನ್ನ ಜೀವನ ನನ್ನದು…’ (ನಕ್ಕು) ಬದುಕಲ್ಲಿ ಎಂತೆಂತೋರೋ ಪಾಠ ಹೇಳ್ಕೊಡ್ತಾರೆ, ಗೊತ್ತೇ ಆಗೋದಿಲ್ಲ! (ಪ್ರೇಕ್ಷಕರನ್ನು ಪ್ರಶ್ನಿಸುತ್ತ)

Ladies Tailor ಆದ್ರೆ ಅಳ್ತೆ ತೊಗೊಳಕ್ಕೆ ಕರೆಕ್ಟ್ ಆಗಿ ಬರ್ಬೇಕು, ೩೬ ಇಡೋ ಕಡೆ ೨೬ ಬರ್ದೇ ಇದ್ರೆ ಅವತ್ತು ನಿಮ್ಮ ತಿಥಿ ಅಂತ ಅರ್ಥ, ಎಲ್ಲ ಕೆಲಸದಲ್ಲೂ ಕನಿಷ್ಠ ಪಕ್ಷ ಒಂದು ತಪ್ಪಿಗೆ ಮಾಫಿ ಇರುತ್ತೆ, Ladies Tailorಗೆ ಆ ಅವಕಾಶ ಇಲ್ವೇ ಇಲ್ಲ! ಅಳ್ತೆ ಕರೆಕ್ಟ್ ಇದ್ರೆ ಅವತ್ತಿನ ಅನ್ನ ಇಲ್ಲವಾದ್ರೆ ಹೊಟ್ಟೆಗೆ ಹಸಿ ಬಟ್ಟೆ!
ಸೀನ ಸತ್ತ ಮೇಲೆ ನಾನು ಅಮ್ಮನ Tailoring Machineನ ರಾಜಾಜಿನಗರದ ರಾಮಂದಿರದ ಎದರ್ಗಡೆ ಒಂದು ಸಣ್ಣ ಅಂಗಡಿ ಮಾಡಿ ಇಟ್ಟು, “ಸೂಜಿ Ladies Tailors “ ಅನ್ನೋ ಬೋರ್ಡ್ ಹಾಕಿ ಕುರ್ಚಿ ಹಾಕೊಂಡು ಕೂತೆ.
ಅಮ್ಮ ಅವತ್ತು ನನ್ನ ನೋಡಿ ಹೆಮ್ಮೆ ಪಟ್ಟಿರಬೇಕು, ಸೀನ ಸಾಯೋದಕ್ಕೆ ಮುಂಚೆ ತಾನು ಪೋಣಿಸ್ತಿದ್ದ ಸೂಜಿನ ನನ್ನ ಕೈಯಲ್ಲಿ ಇಟ್ಟು, “ಇನ್ನು ನನ್ನ ಜೀವನ ಮುಗಿತು!” ಅಂತ ಹೇಳಿ ಕಣ್ಣು ಮುಚ್ಚಿದ.

ಆ ಏರಿಯಾಗೆ ಇದ್ದಿದ್ದು ಒಂದೇ Ladies Tailor ಅಂಗಡಿ, ಜನ ಜಂಗುಳಿ ಇಲ್ದಿದ್ರು, ಕಸ್ಟಮರ್ಸ್ ಗೆ ಕೊರತೆ ಇರ್ಲಿಲ್ಲ, ಸರೋಜಾ ಅಲ್ಲೇ ಪಕ್ಕದ ಕ್ರಾಸ್ನಿಂದ ದಿನ ಅಂಗಡಿ ಮುಂದೆ ಬಂದು ಬಸ್ ಗೋಸ್ಕರ ಕಾಯೊಳು, ಸರೋಜಾ ತುಂಬಾ ಲಕ್ಷಣವಾಗಿದ್ದಳು, ಬಸ್ ಬರೋ ತನಕ ಅಂಗಡಿಯ ಹೊರಗೆ ನಿಂತು ನಾನು ಹೊಲಿತಿದ್ದನ್ನೇ ನೋಡ್ತಾ ನಿಂತಿರ್ತಿದ್ಲು.

ನಾನು ತಲೆ ಬಗ್ಗಿಸ್ಕೊಂಡೆ, ನೋಡಿದ್ರುನೂ ನೋಡ್ದೆ ಇರೋ ಹಾಗೆ ಹೊಲಿತಾ ಇದ್ದೆ. ಒಳಗೆ ಖುಷಿ ಹೊರಗಡೆ ಭಯ, ಮಾತಾಡ್ಸೋಕೆ ಸಂಕೋಚ ಆದ್ರೆ ಪ್ರೀತಿ ಯಾರ್ ಮಾತ್ ಕೇಳುತ್ತೆ? (ಪ್ರೇಕ್ಷಕರನ್ನು ಪ್ರಶ್ನಿಸಿ ನಕ್ಕು ನಾಚಿಕೊಂಡು)
ಅವತ್ತು ಸರೋಜಾ ಬಂದ್ಲು, ಬಸ್ ಸ್ಟಾಪ್ ನಲ್ಲಿ ನಿಂತ್ಲು, ನಾನು ಅಂಗಡಿ ಆಚೆ ನಿಂತಿದ್ದೆ, ಸರೋಜಾ ನಾನು ಫಫ್ ಇಟ್ಟು ಹೊಲ್ದ ಒಂದು ಬ್ಲೌಸನ್ನು ನೋಡ್ತಾನೆ ಇದ್ದಳು, ಇದೆ ಸರಿಯಾದ ಸಮಯ ಅಂತ ನಾನು….
“ಹೊಸ ಡಿಸೈನ್ “ ಅಂದೇ
“ತುಂಬಾ ಡೀಪ್ ಆಗ್ಲಿಲ್ವಾ?” ಅಂತ ಕೇಳಿದ್ಲು
“ಇದೆ ಈಗ ಫ್ಯಾಷನ್ “ ಅಂದೆ
ಅವ್ಳು ನಕ್ಕದ್ಲು, ನಾನು ನಕ್ದೆ
“ಹೆಸರು ಚೆನ್ನಾಗಿದೆ” ಅಂದ್ಲು
“ಇನ್ನೂ ಹೇಳೇ ಇಲ್ವಲ್ಲ ?” ಅಂದೆ
“ಸೂಜಿ Tailors “ ಅಂತ ಬೋರ್ಡ್ ಕಡೆ ಕೈ ತೋರ್ಸಿದ್ಲು
“ಥಾಂಕ್ ಯು” ಅಂತ ಹೇಳಿ ನಾಚ್ಕೊಂಡೆ…
“ಸರೋಜಾ” ಅಂದ್ಲು
“ಹಾ” ಅಂತ ತಲೆ ಎತ್ತೋದ್ರಲ್ಲಿ ಬಸ್ ಬಂದೇ ಬಿಡ್ತು ಹಾಳಾದ್ದು, ಸರೋಜಾ ಬಸ್ ಹತ್ತಿ ಹೋಗೆ ಬಿಟ್ಳು

ಈ ಬಸ್ ಬೇಕಾದಾಗ ಟೈಮ್ ಗೆ ಬರೋಲ್ಲ, ಬೇಡ್ದೇ ಇದ್ದಾಗ ಬೇಕಂತ ಟೈಮ್ ಗೆ ಮುಂಚೆ ಬರುತ್ತೆ, ಆದ್ರೆ ಅವತ್ತು ಸರೋಜಾ ಒಂದು ಕವರನ್ನ ನನ್ನ Tailoring Machine ಮೇಲೆ ಇಟ್ಟಿದ್ಲು, ಬಸ್ ಅಲ್ಲಿ ಕೂತು ‘ಅದೇ ರೀತಿಯ ಫಫ್ ಇರೋ ಬ್ಲೌಸ್ ಹೊಲ್ದ್ ಕೊಡ್ತಿರಾ?’ ಅಂತ ಕಣ್ಣಲ್ಲೇ ಕೇಳಿದ್ಲು ನಾನು ಕಣ್ಣಲ್ಲೇ ಹೂ ಅಂದಿದ್ದೆ.
ಅವತ್ತೇ ಮೊದಲ್ನೇ ಬಾರಿಗೆ ನನ್ನ ಸೂಜಿಗೆ ನಾನು ದಾರ ಪೋಣಿಸೋದಕ್ಕೆ ಆಗ್ದೇ ಅಂಗಡಿನ ಮುಚ್ಚಿದೆ!

(ಎದ್ದು ಅಲ್ಲೇ ಇದ್ದ ಒಂದು ಮಡಿಕೆಯಿಂದ ನೀರನ್ನು ಕುಡಿದು ಕೂತು ಸುಧಾರಿಸಿಕೊಂಡು ಬೆವರನ್ನು ಒರೆಸಿಕೊಂಡು)
ನಂಗೆ, ಸರೋಜನ್ಗೆ ಎರಡು ಮಕ್ಕಳು (ಪ್ರೇಕ್ಷಕರನ್ನು ಕುರಿತು) ಇವತ್ತಿಗೂ ಅವ್ಳು ಫಫ್ ಇರೋ ಬ್ಲೌಸೇ ಹಾಕೋಳೋದು (ನಕ್ಕು)
ಸುಮಾರು ೧೨ ವರ್ಷಗಳ ಕಾಲ ಹೊಲ್ದೆ, ಸೂಜಿ Tailorsಗೆ ಇನ್ನೂ ಇಬ್ಬರು Tailors ಸೇರ್ಕೊಂಡ್ರು, ಶಿಷ್ಯ ಆಗಿದ್ದ ನಾನು ಗುರು ಆಗಿದ್ದು ಕಾಲಚಕ್ರದ ಒಂದು ಮಾಯೆ! ಕಾಲ ಬದ್ಲಾಗಿತ್ತು ಜನರೂ ಬದ್ಲಾದ್ರು

(ತಿರುಗ ಮುದುರಿ ಕೂತು….ಪ್ರೇಕ್ಷಕರನ್ನು ಕುರಿತು)

ನಾಳೆ ನನ್ನ ಗಲ್ಲಿಗೆ ಏರಿಸ್ತಾರೆ (ಜೋರಾಗಿ ನಕ್ಕು)
(ಎದ್ದು ಒಂದು ಕಡೆ ಇಂದ ಇನ್ನೊಂದು ಕಡೆ ನಡೆದು ಒಂದು ಕ್ಷಣ ನಿಂತು.. )

ಅಳ್ತೆ ಮುಖ್ಯ ಅನ್ನೋ ಪಾಠ ಕಲ್ತ Ladies Tailor ನಾನು (ಮೇಲೆ ನೋಡಿ) (ಓಡಾಡಿಕೊಂಡು)
ಅಮ್ಮ.. ಅಮ್ಮ (ಕೂಗುತ್ತ) ನಿನ್ನ ಆಸೆಯಂತೆ ನಾನು Ladies Tailor ಆದೆ, ಆದ್ರೆ ಇವತ್ತು ನಿನ್ನ ಆಸೆನೇ ನನ್ನ ಬಲಿ ತೊಗೊಂಡು ಬಿಡ್ತಲಮ್ಮ? …..(ಮೌನ) ಡಿಗ್ರಿ ಮುಗ್ಸಿದ್ರೆ?

(ಇನ್ನೊಂದು ಕಡೆ ಓಡಿ)

ಸೀನಣ್ಣ ನೀ ಹೇಳ್ದಂಗೆ ಹಂತ್ ಹಂತವಾಗೇ ಬೆಳ್ದೆ, ನಿನ್ನ ಸೂಜಿ ಕಥೆ ಎಲ್ಲರಿಗೂ ಹೇಳ್ಕೊಂಡು ಬಂದೇ.. ನಾಳೆ ನನ್ನ ಸೂಜಿ…….

(ಕೆಳಗೆ ಬಿದ್ದು ಸುಧಾರಿಸಿಕೊಂಡು..)

೧೨ ವರ್ಷ ಜಾರದ ಈ ಕೈಗಳು ಅವತ್ತು ಹೊಸ ಕಸ್ಟಮರ್ ಬಂದಾಗ ಅಳ್ತೆ ತೊಗೋಬೇಕಾದ್ರೆ ಜಾರ್ ಬಿಡ್ತು, ಜಾರ್ದಾಗ ಕೈ ಬಿದ್ದದು ಕಾನೂನಿನ ಚೌಕಟ್ಟಿನಲ್ಲಿ ಅಪರಾಧ. “ಅತ್ಯಾಚಾರ ಮಾಡಲು ಹೊರಟೆ” ಅಂತ ಸಾಬೀತು ಮಾಡಿದ್ದ ಕಾನೂನಿಗೇನ್ ಗೊತ್ತು ಅಳ್ತೆ ತೊಗೊಳೋ ಕೈಗಳು ಬೇಕಂತ ಜಾರಿದ್ದಲ್ಲ ಅಂತ.

Ladies Tailor ನಾನು, ನನ್ನ ಕೆಲ್ಸದಲ್ಲಿ ತಪ್ಪಿಗೆ ಆಸ್ಪದ ಇಲ್ಲ, ಕೈ ಎಲ್ರದ್ದು ಜಾರುತ್ತೆ ಆದ್ರೆ ನಂದು ಜಾರಿದ್ದು ಬರಿ ಒಂದು ಆಕಸ್ಮಿಕ!

ದಾರ ಕಿತ್ತೊಗಿದೆ, ಸೂಜಿಯ ತೂತು ಮುಚ್ಚೋಗಿದೆ, ಸೂಜಿಯ ತುದಿ ಮುರಿದಿದೆ, ಪೋಣಿಸೋಕಾಗದೆ ಸೂಜಿ ಕೈಯಿಂದ ಜಾರಿ ಹೋಗಿದೆ.

(ಬೆಳಕು ಆರುವುದು)

(With the Creative liberty taken based on the news sources where few state Governaments are considering Death penalty for ‘Attempt to Rape’)

-Abhishek Iyengar

Advertisements

5 Comments Add yours

 1. Dr.Pushpa Latha says:

  Once again a nice story from Ai , depicting what is your best the common man!! The ending makes you think !

  Like

 2. Murali Manohar says:

  Very nice and touching story…!! Henge sir?? Sakkathagide..:)

  Like

 3. Raghu Chanan says:

  Wonderful Sir , While reading the story it feels that m going with that character. 👌👌

  Like

 4. Pradeep Mullur says:

  Fantastic Abhishek sir .I liked your narration style and very well connected

  Like

 5. Asmitha says:

  It’s intense!!that philosophical bit is very intriguing….

  Like

Leave a Reply to Pradeep Mullur Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s