Anand ಮೆಡಿಕಲ್ಸ್


1990 ದಶಕದ ಅತ್ಯಂತ ಪ್ರಸಿದ್ದವಾದ landmark; ರಾಜಾಜಿನಗರದ ನವರಂಗ್ talkies. ಒಂದ್ ಕಾಲದಲ್ಲಿ ಜನರ ಜಂಗುಳಿಯನ್ನೇ ಕಂಡ Talkies, 2000 ದ ವೇಳೆಗೆ multiplex ಗಳ ಆರ್ಭಟದಲ್ಲಿ ಮುಸುಕ್ ಹಾಕೊಂಡು ಕೂತಿರದು ನಮ್ಮ ಜಾಗತೀಕರಣದ ಕೊಡುಗೆ. ರಾಜಾಜಿನಗರದ circle ಅಲ್ಲಿ ಇಂದಿಗೂ ಎತ್ತರವಾಗಿ ನಿಲ್ಲೋ talkies, ನಮ್ಮನು ಅವಾಗವಾಗ ಹಳೇ ಬೆಂಗಳೂರಿನ ನೆನಪು ಮಾಡುತ್ತದೆ.

ಅದೇ talkies ಇಂದ ಮುಂದೆ ಹೋಗಿ  Right  ತೊಗೊಂಡ್ರೆ, 10th cross corner ಅಲ್ಲಿ ಇರೋದು “ಆನಂದ್ ಮೆಡಿಕಲ್ಸ್.” ಡಿ ಫಾರ್ಮ ಮಾಡಿ, ಲೈಸೆನ್ಸ್ ಗೆ ಬಿ ಫಾರ್ಮ ಆಗಿರ್ಲೇಬೇಕು ಅಂತ ಅರಿತು ತನ್ನ ಸ್ನೇಹಿತನ ಹೆಸರಿನಲ್ಲಿ ಮೆಡಿಕಲ್ಸ್ ಅನ್ನು open ಮಾಡಿದ್ದ ಆನಂದ. “ನನ್ನ ಹಣೆಬರಹಕ್ಕೆ ನಾನೇ ಕಾರಣ” ಎಂದು ಮೆಡಿಕಲ್ ಸ್ಟೋರ್ ಅನ್ನು ತನ್ನ ಹೆಸರಿನಲ್ಲೇ open ಮಾಡಿದ್ದ. ಆನಂದ ತನ್ನ ವ್ರುತ್ತಿಯನ್ನು ತುಂಬಾ serious ಆಗಿ ನಂಬಿದ್ದ. ೨೦೦೦ ರ ಬೆಂಗಳೂರಿನಲ್ಲಿ, ಟ್ಯಾಗ್ ಹಾಕೊಂಡು ಬಸ್ಸಿಗೆ ಕಾಯುವ ಜನರ ಅಬ್ಬರದಲ್ಲಿ, ಆನಂದ ತನ್ನ ಮೆಡಿಕಲ್ ಸ್ಟೋರ್ ಅನ್ನು  International Standard’s  ಗೆ ಬೆಳಸಬೇಕು ಅಂತ ಹಗಲು ರಾತ್ರಿ ಕನಸು ಕಾಣುತ್ತಿದ್ದ.

ಸದಾ ಮುಗುಳ್ನಗೆಯೊಂದಿಗೆ ಅಂಗಡಿ ಬಾಗ್ಳನ್ನು open ಮಾಡ್ತಿದ್ದ ಆನಂದನಿಗೆ ತನ್ನ ಮೆಡಿಕಲ್ ಸ್ಟೋರ್ ಎದುರು ಇದ್ದ ಒಂದು ಸಣ್ಣ ಕಟ್ಟೆ ಏ ಪ್ರೇರಣೆ ಆಗಿತ್ತು. ಬಾಲ್ ಭವನ್ ನ ದೊಡ್ಡ ಮರದ ನೆರಳು ಒಂದು ಕಟ್ಟೆ ಮೇಲೆ ಆಕಸ್ಮಿಕವಾಗಿ ಬಿದ್ದಿದರಿಂದ ಪ್ರಾರಂಭವಾಗಿತ್ತು “Pensioners paradise”

“ಪಕ್ಕ English ಹೆಸರೇ ಇಡಬೇಕು ಅಂತ ಹಠ ಮಾಡಿ “ಕಟ್ಟೆ” ಅನ್ನೋದನ್ನ ” Pensioners Paradise” ಅಂತ ನಮಾಂತರ ಮಾಡಿ, ಮಹಾತ್ಮಾ ಗಾಂಧೀಜಿಯ ಫೋಟೋ ಒಂದನ್ನು ಸಿಲುಕಿ ಶೇಷಚಲಂ paradise ನಾ team leader ಆಗಿದ್ರು. ಮೈಸೂರ್ ಬ್ಯಾಂಕ್ ಅಲ್ಲಿ ಸುಮಾರು ೫೦ ವರ್ಷಕ್ಕೂ ಮೇಲೆ ಸೇವೆ ಸಲ್ಲಿಸಿ, ರಿಟೈರ್ ಆಗಿದ್ದ ಇವ್ರು ಎಲ್ಲರಿಗೋ “Paradise ಶೇಷ” ಅಂತಾನೆ famous ಆಗಿದ್ದ್ರು. ಕಿರಿಕ್ ಮೂರ್ತಿ, ನಾರಾಯಣ್ ಅಯ್ಯರ್, ಮೇಜರ್ ರಾಮನ್, ಗಂದಿನಗ್ರ ಸುಬ್ಬ ಸೇರಿದಂತೆ “paradise”  ನ ಪಂಚ ಪಾಂಡವರು ದಿನಾ ಸೇರಿ area ಗೆ  ಹೊಸ ಗಮತ್ತನೇ ತರುತ್ತಿದ್ದರು.

“ಆನಂದ್ ಮೆಡಿಕಲ್ಸ” ಎದುರು ಇದ್ದ “pensioners Paradise” ಆನಂದನಿಗೆ ತುಂಬಾ ಹತ್ತಿರವಾಗಿತ್ತು. ಸರಿಯಾಗಿ ೧೧:೩೦ ಸೇರುತ್ತಿದ್ದ ಈ  ಐವರಿಗೆ  “Afternon Tea” ಆನಂದನೇ  sponsor  ಮಾಡುತ್ತಿದ್ದ, ಆನಂದನ  assistant, ಮುಸ್ಕಾನ್, “ದಿನ ಬೆಳಗೆ ಹಿಂಗೆ  ಸಮಾಜ ಸೇವೆ ಮಾಡ್ತಿದ್ರೆ ಮೆಡಿಕಲ್ ಸ್ಟೋರ್ ಮಠ” ಅಂತ ಬೈಕೊಂಡು ಫ್ಲಾಸ್ಕ್ ಒಂದನ್ನು ತೊಗೊಂಡು ಟೀ ತುಂಬಿಸಿಕೊಂಡು ಬರ್ತಿದ್ದ.

“ಅ ಮುಸ್ಕಾನ್ ಗೆ  ಸ್ವಲ್ಪ ಬುದ್ದಿ ಹೇಳೋ ಆನಂದ, ನಿನಷ್ಟು ಒಳ್ಳೆ ಬುದ್ದಿ ಇಲ್ವಲ್ಲೋ ಅವನಿಗೆ..” ಅಂತ ಬೈದು ಅವ್ನ ಕೈಯಲ್ಲೇ ದಿನಾ tea ತರಸ್ಕೊಂಡು ಕುಡಿತ್ತಿದ್ದ್ರು ಶೇಷ, “ಹೋಗ್ಲಿ ಬಿಡಿ ಸರ್ ವಯಸಾದ್ಮೇಲೆ ಅರ್ಥ ಆಗುತ್ತೆ..” ಅಂತ ಸಮಧಾನೆ ಹೇಳಿ ಆನಂದ ಲೆಕ್ಕ ಪುಸ್ತಕ ಹಿಡಿದು ಮಾತ್ರೆಗಳ  stock  ಅನ್ನು  ಏಣಿಸುತ್ತಾ ಬ್ಯುಸಿ ಆಗ್ತಿದ್ದ

ಆನಂದನ ಶ್ರದ್ದೆ ಅಪಾರ, “ಈಗಿನ್ ಕಾಲ್ದಲ್ಲಿ ಎಥಿಕ್ಸ್ ಏ ಇಲ್ಲಾ ಸರ್” ಅಂತ ಬೈಕೊಂಡು ಬಂದ ಎಲ್ಲಾ customers ನಾ prescriptionಅನ್ನೂ ಪರಿಶೀಲಿಸಿಯೇ ಮಾತ್ರೆ ಕೊಡೊ ಇವನ ಅಭ್ಯಾಸ ರಾಜಾಜಿನಗರದಲ್ಲಿ famous ಆಗಿತ್ತು. “ಸ್ವಲ್ಪ ತಲೆ ನೋವು.. ಏನಾದ್ರು ಮಾತ್ರೆ..?” ಅಂತ ಬಂದು ಕೆಳ್ದವ್ರಿಗೆ ಆನಂದ “ನಾನೇನ್ Doctor ಆ ?” ಅಂತ ಗಧರಿಸಿ ವಾಪಸ್ಸು ಕಳುಹಿಸ್ತಿದ್ದ. ಇದನ್ನು ನೋಡುತ್ತಿದ ಶೇಷ ಮತ್ತು ಅವ್ರ gang”ಲೋ ಹಿಗೇ ಮಾಡದ್ರೆ ಯಾವಾಗ್ಲೊ ನೀನು ಕಿಂಗ್ ಆಫ್ ಮೆಡಿಕಲ್ಸ್ ಆಗೋದು?” ಅಂತ ಹಾಸ್ಯ ಮಾಡಿ ಕಾಲ್ ಎಳ್ದು ನಕ್ತಿದ್ದ್ರು,?” ಅನಂದ ಅವ್ರ ನಗುವಲ್ಲಿ ತನ್ನ ಸಂತೋಷವನ್ನು ಕಾಣುತ್ತಿದ್ದ.

ಸರಿಯಾಗಿ ೫ ಗಂಟೆಗೆ “pensioners paradise” ಪ್ಯಾಕ್ ಆದ್ಮೇಲೆ ಅನಂದನಿಗೆ ಅದೇನೋ ಬೇಜಾರು, ಆದ್ರೆ ಸದಾ ಬರ್ತ್ತಿದ್ದ ಅವನ ಗಿರಾಕಿಗಳನ್ನು ಮಾತಾಡಿಸುತ್ತಾ ತನ್ನ ಕೆಲಸದಲ್ಲಿ ಬ್ಯುಸಿ ಆಗ್ತಿದ್ದ. ಹೇಗೆ ಒಮ್ಮೆ ಆಗಸ್ಟ್ ೧೦ ರಂದು ಅವತ್ತು ಶೇಷಾ ೫ ಗಂಟೆಗೆ ಹೊರಡ್ಬೇಕಾದ್ರೆ “ಲೋ ಆನಂದ ಯಾಕೋ ಹೊಟ್ಟೆ ತುಂಬಾ ಗರಂಆಗಿದೆ ನಿನ್ನ ಎಥಿಕ್ಸ್ ನಾ ಬದಿಗಿಟ್ಟು ಒಂದು ಮಾತ್ರೆ ಕೊಡೊ, ಡಾಕ್ಟರ ಹತ್ರ ಹೋದ್ರೆ ಸುಮ್ನೆ ಖರ್ಚು ಮನೆಲಿ finance ಸ್ವಲ್ಪ ಭಿಗಿ..” ಅಂತ ಬಾಯ್ ಬಿಟ್ಟು ಕೆಲ್ಬಿಟ್ರು, ಒಂದು ಕ್ಶಣ ಆನಂದನಿಗೆ ದಿಕ್ಕೇ ತೊಚ್ದಂದ್ಗಾಗೊಯ್ತು. ಒಂದ್ ಕಡೆ ಅನಂದನ ಎಥಿಕ್ಸ್ ಇನ್ನೊಂದ್ ಕಡೆ ತಾನು “Paradise ಶೇಷ” ರ ಮೆಲೆ ಇಟ್ಟ ಪ್ರೀತಿ! “ತಾನೆ ಮಾತ್ರೆ ಕೊಡ್ಬೆಕಾ ಅಥವಾ doctor ಹತ್ತ್ರಾ ಹೊಗೊದಕ್ಕೆ ಹಣ ಕೊಡ್ಬೆಕಾ?” ಅನ್ನೊ ಯಕ್ಶ ಪ್ರಶ್ನೆ ಅವ್ನಲ್ಲಿ ಕಾಡೊದಕ್ಕೆ ಆರಂಭವಾಯ್ತು. ಆನಂದ ಯೊಚನೆಯಲ್ಲಿ ಕಂಗಾಲಾದ! ತಲೆ ಕೆರ್ಕೊಂಡು ತನ್ನ ಕಣ್ಣುಗಳನ್ನು ಕೆಳೆಗೆ ಬಾಗಿಸಿ “ಅದೂ ಸಾರ್… ಮಾತ್ರೆ… ಅದೂ ನಾನು.. Doctor.. ಅಲ್ಲಾ..” ಅಂತ ಸಣ್ಣ ದ್ವನಿಯಲ್ಲಿ ಗುಸುಗುಟ್ಟಿದ್ದ. ಅರ್ದಂಬರ್ದ ಕೇಳ್ಸೊಂಡ ಶೇಷಾ “ನೋಡು ನೀನು ನಿನ್ನ ಹಳೇ ಎಥಿಕ್ಸ್ ರಾಗ ಹಾಡದ್ರೆ ನಾಳೆಯಿಂದ “Pensioners Paradise” ಭಂದ್ ಅಂತ blackmail ಮಾಡಿ ತನ್ನ ಮುಖುವನ್ನು ರಸ್ತೆ ಕಡೆ ತಿರುಗಿಸಿ ನಿಂತರು. ಗತಿನೇ ಇಲ್ದೇ ಆನಂದ ತಕ್ಶಣ ಒಳಗೆ ಓಡಿ ಸಣ್ನದೊಂದು plastic ಡಬ್ಬಿ ತೆಗೆದು ಮುಸ್ಕಾನ್ ನೋಡಿ “ಕತ್ತ್ರಿ ಕೊಡು..” ಅಂತ ಕೇಳಿದ, ಆನಂದನ ಕೈ ನಡುಗುತ್ತಿತ್ತು, ಬೆವರು ಹಣೆಯಿಂದ ಸೊರಿ ಮೂಗಿನ ತುದಿಗೆ ಹರಿದು ನಿಂತ್ತಿತ್ತು

“ಇಗೊ ತೊಗೊಳಿ ಕತ್ತ್ರಿ..” ಅಲ್ಲಾ ಸಾರ್ ಇದು ಬೆಕಾ? Tea ಕಾಸ್ ಉಳ್ಸೊದಕ್ಕೆ ಇದು ಒಳ್ಳೆ chanceಊ..” ಅಂತ, ಮುಸ್ಕಾನ್ ತನ್ನ point ಅನ್ನು ಖಡಕ್ ಆಗಿ ಹೇಳ್ದಾ..

“ಬಾಯಿ ಮುಚ್ಕೊಂಡು ಇರ್ತಿಯಾ ಸ್ವಲ್ಪಾ..”ಅಂತ, ಅನಂದ ಗದರಿಸಿ ಹರಿಬರಿಯಲ್ಲಿ ಸಣ್ಣ ಡಬ್ಬಿಯೊಂದರಲ್ಲಿ ಮಾತ್ರೆಗಳನ್ನು ಹುಡುಕುತ್ತಾ “ಥೂ ಇದ್ರಲ್ಲಿ ಇಲ್ಲಾ..” ಅಂತ ತನ್ನನ್ನು ತಾನೇ ಬೈಕೊಂಡು “ಗಿರಕಿಗಳು ಬಂದ್ರೆ ನೊಡ್ಕೊ” ಅಂತ ಮುಸ್ಕಾನ್ಗೆ ಹೇಳಿ ಒಳಗ್ ಓಡ್ದಾ.

ಅಲ್ಲಿ ಆಚೆ ಶೇಷಾ ಮುಖ ಊದಿಸ್ಕೊಂಡು “ಆಯ್ತು ನೀನು ಕೊಡೊಲ್ಲಾ, ಇನ್ನು ನಮ್ಗೆ ಬೆರೆ ಜಾಗನೇ ಗತಿ, I will tell all my gentlemen not to come here” ಅಂತ english ಅಲ್ಲಿ ಬೈಕೊಂಡು ಇನ್ನೇನ್ ಹೊರ್ಡ್ಬೇಕು ಅಷ್ತ್ರಲ್ಲಿ ಆನಂದ ಒಳಗಡೆ ಇಂದ ಓಡ್ ಬಂದು

“ಸಾರ್ ತೊಗೊಳಿ ನಿಮ್ಮ ಮಾತ್ರೆ..”

“ಮನೆಗೆ ಹೋದ್ಮೆಲೆ ಈ ಪಟ್ನದಲ್ಲಿ ಇರೋ ಮಾತ್ರೆನಾ ನೀರಲ್ಲಿ ಕರಗಿಸಿ, ಆಮೇಲೆ ಎರಡ್ನೆ ಪಟ್ನದಲ್ಲಿ ಇರೊ ಪುಡೀನಾ mix ಮಾಡೀ ೪ ಸರಿ ಕುಡಿರಿ, ನನ್ಗೆ phone ಮಾಡೀ” ಅಂತ ಹೇಳಿ ೨ ಪಟ್ನಗಳನ್ನು ಕೈಗೆ ಇಟ್ಟು ನಿಟ್ಟುಸಿರು ಬಿಟ್ಟಾ..

“ಅಲ್ವೊ english ಮಾತ್ರೆ ಕೊಡೋ ಅಂದ್ರೆ ಇದೆನೊ ಇದು ಒಳ್ಳೇ ಅಯುರ್ವೆದದ ತರ ಪಟ್ನಾ ಕೊಡ್ತಿಯಲ್ಲೂ, ವಾಸಿ ಆಗುತ್ತಾ? ಅಂತ ಸಿಡುಕಿ ಶೆಷಾ ತನ್ನ ತಲೆ ಚೆಚ್ಚಿಕೊಂಡರು

“ಸಾರ್ ಇದೂ english ಮಾತ್ರೆನೆ loose ಕೊಟ್ಟಿದ್ದೇನೆ, ನನ್ನ ಮಾತ್ ಕೇಳಿ ತೊಗೊಳಿ..” ಅಂತ ಸಮಧಾನ ಹೇಳಿ ಶೇಷಾ ರನ್ನು ರಸ್ತೆಗೆ ತುದಿಗೆ ಬಿಟ್ಟು ಮೆದಿಕಲ್ಸ್ ಗೆ ವಾಪಸ್ಸ್ ಬಂದು, ಮುಸ್ಕಾನ ನ ಕರ್ದು “ಲೊ tea ಹೇಳೊ..” ಅಂತ order ಮಾಡಿ book ಒಂದನ್ನು ಹಿಡಿದ.

“ಇಷ್ಟೊಂದ್ tension ಯಾಕೆ? ಅದ್ ಸರಿ ಒಂದ್ ೫೦ ರುಪಾಯಿ ತೊಗೊತೀನಿ change ಗೆ ಕೊಡ್ತಿವಲ್ಲಾ ’ಶುಂಟಿ ಮಿಟಾಯಿ’ ಅದನ್ನ ತರ್ಬೇಕು, ಕಾಲಿ ಅಗೊಗಿದೆ.. ಥೂ ಯಾವ್ ಕಲಾ ನೊ ಶುಂಟಿ ಮಿಟಾಯ್ಗೂ ಬೇದಿ ಮಾತ್ರೆಗೂ size ನಲ್ಲಿ ವ್ಯತ್ಯಾಸನೇ ಇಲ್ಲಾ..” ಅಂತ ಬೈಕೊಂಡು ಅಂಗಡಿಯಿಂದ ಹೊರ್ಟಾ. ಬುಕ್ ಹಿಡಿದ ಆನಂದಿನಿಗೆ ಒಮ್ಮೆ current ಹೊಡ್ದಂಗಾಯ್ತು, ಮುಸ್ಕಾನ್ ಹೇಳಿದ ಆ ಮಾತು ತಕ್ಶಣ ಸುನಾಮಿ ಹೊಡ್ದಂಗೆ ಅವ್ನ ತಲೆಗೆ ಹೊಡೀತು, ಒಮ್ಮೆ ಎದ್ದು ತಾನು ಶೇಷಾ ನಿಗೆ ಕೊಟ್ಟಿದ್ದು ಬೇದಿ ಮಾತ್ರೆ ನಾ ಅಂತ ಖಚಿತ ಮಾಡ್ಕೊಂಡ! Sizeನಲ್ಲಿ ಎರಡು ಒಂದೆ ಇದ್ದ ಕಾರಣ ಅವಾಂತರದಲ್ಲಿ, ಅಂಗಡಿಯಲ್ಲಿ ಶುಂಟಿ ಮಿಟಾಯಿ ಆಗೊಗಿದ್ದನ್ನು ಮರ್ತು ಹೊಟ್ಟೇ ಕೆಟ್ಟದ್ದ ಶೇಷ ನಿಗೆ ತನ್ನ ethics ಅನ್ನು ಉಳಿಸಿಕೊಳ್ಲುವುದಕ್ಕಾಗಿ ಬೇದಿ ಮಾತ್ರೆಯನ್ನು ಕೊಟ್ಟಿರುವುದನ್ನು ಅರಿತ.

Loose Motion ಆಗಿ dehydration ಆಗಿ ಶೇಷಾ ರ ಸ್ತಿಥಿ ಇನ್ನೂ ಕೆಡೊದು ಖಚಿತಾ ಅಂತ ತಿಳಿದ ಆನಂದ ಶೇಷಾ ರ ಮನೆಗೆ ಹೊಗಿ ಮಾತ್ರೆ ಪಟ್ನವನ್ನು ವಾಪಸ್ಸು ಪಡಿಬೇಕೆಂದು ನಿರ್ಧರಿಸಿದ, ಚಪ್ಲಿ ಹಾಕೊಂಡು ready ಆದ ಆನಂದನಿಗೆ ತಕ್ಷಣ ಹೊಳ್ದಿದ್ದು “ಅರೇ ಇಷ್ಟ್ ವರ್ಷದಿಂದ ಗೊತ್ತು, ಆದ್ರೆ ಅವ್ರ್ ಮನೆನೇ ಗೊತ್ತಿಲ್ವಲ್ಲಾ?” ಆನಂದಿನಿಗೆ tension ಜಾಸ್ತಿ ಅಗೊಯ್ತು, ಒಂದ್ ಕಡೆ ನಿಲ್ಲೋದಕ್ ಆಗ್ದೆ ತನ್ನ mobile ಅನ್ನು ತೆಗೆದು ಶೇಷಾರಿಗೆ call ಮಾಡ್ದ, ದುರಾದುಶ್ಟವಷಾತ್ ಶೇಷಾ ರ phone switch off ಅಂತ ಬಂತು, ಕೊಪದಿಂದ ತನ್ನ phone ಅನ್ನು ಬದಿಗೆ ಎಸೆದು ತನ್ನ ತಲೆ ಚೆಚ್ಚ್ಕೊಂಡು ಜೊರಾಗಿ ಕಿರುಚಿದ, ಇದನ್ನು ಕೇಳಿ ಮುಸ್ಕಾನ್ road side ಇಂದಾ ಓಡ್ ಬಂದು.. “ಸರ್ ಯೆನಾಯ್ತು?” ಅಂತ ಗಾಭರಿಯಿಂದ ಪ್ರಶ್ನಿಸಿದ.

ಮುಸ್ಕಾನ್ ನೊಡಿದ್ ಕೂಡಲೆ “ಲೊ ಶುಂಟಿ ಮಿಟಾಯಿ ಕಾಲಿಯಾಗಿದ್ದು gurantee ನಾ?” ಅಂತ ಆತುರದಿಂದ ಪ್ರಶ್ನಿಸಿದ್ದ..

“ಸಾರ್ 100% gurantee, ಕಾಲಿ ಆದ್ಮೆಲೆ ನೀವೆ ಬೇದಿ ಮಾತ್ರೆ ಇಟ್ಟಿದ್ರಲ್ಲಾ ಸಾರ್ ಆ ಡಬ್ಬಿಯಲ್ಲಿ. ಯಾರ್ಗಾದ್ರು ಈ ಬೆದಿ ಮಾತ್ರ ಕೊಟ್ಟಿರಾ ಅಂತಾ ಹಾಸ್ಯನೂ ಮಾಡಿದ್ನಲ್ಲಾ ಸಾರ್ ನಾನು” ಅಂತ ಹೇಳಿ ಆನಂದನ ತಲೆ ಮೇಲೆ ಕೈ ಇಟ್ಟು, “ಜ್ವರ ನಾ ಸರ್” ಅಂತ ಕೇಳ್ದ.

“ಶೇಷಾ ರ ಮನೆ ಗೊತ್ತಾ?’ ಅಂತ ಆತುರದಲ್ಲಿ ಆನಂದ, ಮುಸ್ಕಾನ್ ನನ್ನು ಪ್ರಶ್ನಿಸಿದ್ದ

“ಗೊತ್ತಿಲ್ಲಾ ಸಾರ್! ಸದ್ಯಾ ಗೊತ್ತಿದ್ರೆ ಅಲ್ಲೂ tea ಕೊಟ್ ಬಾ ಅಂತ ಹೇಳ್ತಿದ್ದ್ರೀ..” ಅಂತ ಹಾಸ್ಯ ಮಾಡೀ ಬಂದ ಗಿರಕಿಗಳನ್ನು ವಿಚಾರಿಸಲು ಹೊರ್ಟಾ

ಮನೆನೂ ಗೊತ್ತಿಲ್ದೆ, phone callಊ ಹೋಗ್ದೆ ಆನಂದ ಹುಚ್ಚನಾದ, ತನ್ನ ಸಂಕಟವನ್ನು ಯಾರಿಗೂ ಹೇಳ್ಕೊಳಕ್ ಆಗ್ದೆ ಒಳಗಡೆ ಹೊಗಿ ಕಣೀರಿಟ್ಟ, ಮುಸ್ಕಾನ್ಗೆ ಮನೆಗೆ ಕಳುಹಿಸಿ ಅವತ್ತು ಸಾಯಂಕಾಲ ೬ ಗಂಟೆಗೆಲ್ಲಾ ಮೆಡಿಕಲ್ಸ್ ಬಾಗ್ಲನ್ನು ಹಾಕಿ ತನ್ನ ಮನೆಗೆ phone ಮಾಡಿ ರಾತ್ರೆ ಊಟಕ್ಕೆ ಬರೊಲ್ಲಾ ಅಂತ ತಿಳಿಸಿ police station ಕಡೆ ಹೆಜ್ಜೆ ಹಾಕಿದ. ಶೇಷಾರಿಗೆ ಪ್ರತಿ ೧೦ ನಿಮಿಶಕ್ಕೆ phone try ಮಾಡುತ್ತಾ, ರಸ್ತೆ ಮದ್ಯದಲ್ಲಿ ನಿಂತು ತನ್ನ ಕಣೀರನ್ನು ಒರಸಿ police station ಎದುರು ಇದ್ದ ದೇವಸ್ತಾನದಲ್ಲಿ ಕುಳಿತು ಧ್ಯಾನದಲ್ಲಿ ತೊಡಗಿದ. ಬೆಳಗೆ ಶೇಷಾ dehydration ಇಂದ hospital ಸೇರಿ ಸಾಯೋದು ಖಚಿತ, ಇದೊಂದು medical ಕೊಲೆ, ತನ್ನಿಂದಾನೆ ಆಗಿದ್ದು ಅಂತ ಪೋಲಿಸರಿಗೆ ಹೇಳಿ surrender ಆಗ್ಬೇಕು ಅಂತ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡ.

ಕಡೆಯದಾಗಿ ಶೇಷಾ ರ phone ಗೆ call ಮಾಡೀ “switch off” ಅನ್ನೊ ದ್ವನಿಯನ್ನು ಕೇಳ್ಕೊಂಡು ಮೆಡಿಕಲ್ಸ್ ಗೆ ವಾಪಸ್ಸು ಬಂದು ನಿದ್ದೆ ಮಾತ್ರೆ ಯ strip ಒಂದನ್ನು ತೆಗೆದು, ಮತ್ರೆ ಒಂದನ್ನು ಅರ್ಧ ಮಾಡಿ ಗುಳುಂ ಅಂತ ನುಂಗಿ ಕಣೀರ್ ಹಾಕುತ್ತಾ “Pensioner’s Paradise” ನಾ ನೆನಪುಗಳನ್ನು ಮೆಲಕಾಕುತ್ತಾ ಕಣ್ಣ್ ಮುಚ್ದ.

ಆನಂದ august 10 ತನ್ನ ಜೀವನದ ಕೊನೆಯ ದಿನವೆಂದು ಭಾವಿಸಿದ್ದ.

ಮರುದಿನಾ ಸುಮಾರು ೧೧:೪೫ ಆಗಿತ್ತು, “ದಡಂ ದಡಂ ದಡಂ..” ಅನ್ನೊ ಬಾಗಿಲು ಬಡಿಯೊ ಶಬ್ದ ಆನಂದನಿಗೆ ಕೇಳಿಬಂತು, ತನ್ನ ಖುರ್ಚಿಯಿಂದ ತಕ್ಷಣ ಎದ್ದು “ಇಲ್ಲಾ ನಾನ್ ಕೊಲೆ ಮಾಡಿಲ್ಲಾ..” ಅಂತ ಗಾಭರಿಯಿಂದ ಕಿರುಚಿದ.

“ಯಾರ್ನೊ ಕೊಲೆ ಮಾಡ್ದೆ? ಏಳೊ..ಮೆಲೆ” Major ರಾಮನ್ ಕೊಗಿದರು, ರಾಮನ್ ರವರ ದ್ವನಿಯನ್ನು ಕೇಳಿ ಆನಂದ ಎದ್ದು ಸರಸರನೆ ಅಂಗಡಿಯ ಬಾಗ್ಲನ್ನು ತೆಗೆದ! ಪಿಳ ಪಿಳ ಅಂತ ಕಣ್ ಬಿಡುತಿದ್ದ ಆನಂದನ ಕಂಡು Major “ಎನೊ ಅದೂ ಯಾರ್ನ ಕೊಲೆ ಮಡ್ದೆ? ರಾತ್ರೆ ಮನೆಗೆ ಯಾಕ್ ಹೊಗ್ಲಿಲ್ಲಾ? ” ಅಂತ ಪ್ರಶ್ನೆಗಳ ಬಾಣಗಳನ್ನು ಸುರಿಸಿದರು, ಆನಂದನ ಕಣ್ಣೂ “paradise” ನಾ ಕಟ್ಟೆ ಹತ್ತ್ರಾ ಹೊಯ್ತು ಶೇಷಾಚಲಂ ಇರ್ಲಿಲ್ಲಾ, ಆನಂದ ರಮನ್ ರನ್ನು ನೊಡಿ “ತುಂಬಾ serious ಆ? ಅಂತ ಕೇಳ್ದಾ..

“ಇಲ್ಲಾ ಕಣೋ.. ನನ್ನ ಹಣೇಬರಹ….” ಅನ್ನೊ ಸಿಡ್ಕೊ ದ್ವನಿ ಕೇಳ್ ಬಂತೂ, ಆನಂದ Major ರನ್ನು ಬಾಜುಗೆ ಸರಿಸಿ ನೊಡ್ದಾಗ ಕಂಡದ್ದು ಶೇಷಾಚಲಂ, ತನ್ನ walking stick ನಾ ತುದಿಯನ್ನು clean ಮಾಡುತ್ತಾ “ರಾಮ ಕ್ರಿಶ್ನಾ” ಅಂತಾ ಕೂತರು, ಆನಂದನಿಗೆ ಅವ್ರನ್ನು ನೊಡಿ ಸಂತಸ ತಡಿಯೊಕ್ ಆಗ್ದೆ ಓಡಿ ಅವ್ರನ್ನು ಭಿಗಿಯಾಗಿ ತಬ್ಕೊಂಡು ಜೊರಾಗಿ ಅತ್ತ. “Pensioner’s Paradise” ನಾ ಎಲ್ಲಾ members ಕಕ್ಕಾ ಬಿಕ್ಕಿಯಾಗಿ ನೊಡುತ್ತಾ “ಸಮಾಧಾನ್ವಾಗಿ ವಿಚಾರಿಸೊಣ” ಅಂತ ನಿರ್ಧರಿಸಿ ಆನಂದನ ತಲೆ ಸವರಿ ಮನೆಗೆ ಹೊಗಲು ಬುದ್ದಿವಾದ ಹೇಳದ್ರೂ.

ganga-medicals-rajajinagar-bangalore-c9fce

ಆನಂದ ಎದ್ದು ತನ್ನ ಚಪ್ಪಲಿ ಹಾಕೊಂಡು ಅಂಗಡಿಯ ಬಾಗ್ಲನ್ನು ಎಳದು ಶೇಷಾ ರ ಹತ್ತಿರ ಬಂದು “ನೆನ್ನೆ ಕೊಟ್ಟಿದ್ದ್ ಮಾತ್ರೆ..?” ಅಂತ ಪ್ರಶ್ನಿಸಿದ್ದ

“ಅದಾ! ದರಿದ್ರದ್ದು, ನಿನ್ ಎಥಿಕ್ಸ ನಾ ಪ್ರಶ್ನೆ ಮಾಡಿ ಮಾತ್ರೆ ತೊಗೊಂಡ್ನಾ! ದಾರಿಯಲ್ಲಿ ಕತ್ತ್ಲೆ ಇತ್ತು ಕಾಲ್ ಜಾರಿ ನೀನ್ ಕೊಟಿದ್ದ ಮಾತ್ರೆ ಮೊರಿಯಲ್ಲಿ ಬಿದ್ದೊಯ್ತು ಹಾಳಾದದ್ದು..” ಆಮೆಲೆ ಮನೆಗೆ ಹೊದ್ಮೆಲೆ ಸೊಸೆ ಮೆಣಸಿನ ರಸ ಮಾಡ್ ಕೊಟ್ಳು, ಹೊಟ್ಟೆ full fit ಈಗಾ…” ಅಂತ ಹೇಳಿ ತನ್ನ ಜೇಬಿಂದ mobile ತೆಗೆದು ” ಇದೊಂದು ಮುಂಡೆದು ON ಏ ಆಗ್ತಿಲ್ಲಾ.. ” ಅಂದು “ಮುಸ್ಕಾನ್ ಇವತ್ತು tea ನನ್ನ್ ಕಡೆಯಿಂದ,.order ಮಾಡು” ಅಂದ್ರು..

ಆನಂದ ಜೊರಾಗಿ ನಕ್ಕು ಮನೆ ಕಡೆ ದಾರಿ ಹಿಡ್ದ, ಮುಸ್ಕಾನ್ ಓಡಿ ಆನಂದನ ಹತ್ತ್ರಾ ಬಂದು “ಸಾರ್ ನೆನ್ನೆ ನಿಮ್ಗೆ ಹುಷಾರ್ ಇರ್ಲಿಲ್ಲ ಇಲ್ಲೇ ಮಲ್ಗಿದ್ರಂತೆ! ನೀವು ಮನೆಗೆ ಹೊರಡಿ, ಅಂಗಡಿಯನ್ನು ನಾನ್ ನೊಡ್ಕೊಳ್ತೀನಿ ಮತ್ತೆ ಅದ್ಯಾವ್ದೊ ಹೊಸ ೨ ಪಟ್ನಾ ಕೊಟ್ರಾಲ್ಲಾ ಬೇದಿಗೆ ಯಾವ್ ಮಾತ್ರೆ ಅದು? customers ಬಂದ್ ಕೇಳದ್ರೆ ಅದನ್ನ?” ಅಂತ ಮುಸ್ಕಾನ್ ಕಾತುರದಿಂದ ಕೇಳಿದ.

“ಒಂದ್ ಪಟ್ನದಲ್ಲಿ fride ಪಕ್ಕದಲ್ಲಿ ಇರೊ ಗೊಡೆ ಸುಣ್ನಾ ನಾ ಕೆರ್ದು ಹಾಕು.. ಇನ್ನೊಂದ್ ಪಟ್ನದಲ್ಲಿ ಶುಂಟಿ ಮಿಟಾಯ್ ಹಾಕು” ಅಂತ ಹೇಳಿ ನಕ್ಕು ಮುಸ್ಕಾನ್ ತಲೆ ಸವರಿ ಆನಂದ ಹೊರಟ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s