13th cross ನಾ ಅರಳಿ ಕಟ್ಟೆ

ಬೆಂಗಳೂರು ಬದಲಾಗುತ್ತಿತ್ತು, ಬರೀ ಲಾಲ್ ಭಾಗ್, MTR ಗೆ ಹೆಸರುವಾಸಿಯಾದ ಸಣ್ನಾ ಊರು ಇಂದಿಗೇ ವಿಶಾಲವಾಗಿ ಬೆಳದು ಜಗತ್ತಿನ IT city ಯೆಂಬ ಹೆಮ್ಮೆಗೆ ಪಾತ್ರವಾಗಿತ್ತು. ಮೂಲೆ ಒಂದನ್ನು ಆರಿಸಿಕೊಂಡು, ITPL ಅಂತ ಹೆಸರಿಟ್ಟು ಬರೀ ಗಾಜು, ಮಣ್ಣು, ಇಟ್ಟಿಗೆ ಸೇರ್ಪಡಿಸಿ ಹಂತದ ಮೇಲೆ ಹಂತ ನಿರ್ಮಿಸಿ ಕುರಿಗಳನ್ನು ಸಾಕೊ ಹಾಗೆ ’tag ಮಾನವರನ್ನು’ ಪ್ರತಿ ದಿನಾ ಬೆಳಗೆ, ಸಾಂಕಾಲ ಸರಬರಾಜು ಮಾಡೊ ತಾಕತ್ತು ಬೆಂಗಳುರಿಗೆ ಇತ್ತಿಚೆಗೆ ಸಿಕ್ಕ ವರ-ವೆಂದರೆ ತಪ್ಪಾಗಲಾರದು. ಮತ್ತೊಂದು ಕಡೇ ಮ್ಯಸೊರು ಹೊಗು ರಸ್ತೆಯನ್ನು ಕೂಡ siteಗಳನ್ನು ಮಾಡೀ, ಬೆಂಗಳೂರಿಗೆ ಸೇರಿಸಿಕೊಂಡ ಹೆಮ್ಮೆ ಎದ್ದು ಕಾಣುತಿತ್ತು.

ಇದೆಲರೆಲ್ಲಾ ಮದ್ಯೆ ನಿಜವಾಗಿಯೋ ಬೆಂಗಳೂರು ಬದಲಾಗುತಿತ್ತು ಎಂಬುದಕ್ಕೆ symbolic representation ನಮ್ಮ ಮಲ್ಲೇಶ್ವರಂ! ಬರೀ ಭ್ರಾಮಣರೇ ತುಂಬಿಕೊಂಡಿದ್ದ area ದಲ್ಲಿ ಇತ್ತೀಚೆಗೆ “Al-bek” ಅನ್ನೋ ದೊಡ್ದ ಗಾತ್ರದ ಮಾಂಸಹಾರಿ hotel ಒಂದು ಪ್ರಾರಂಭವಾಗಿತ್ತು.

“ಇನ್ನು ನೊಣ ಹೊಡಿಯೊದ್ ಒಂದು ಬಾಕಿ, ಇಲ್ಲಿ ಇದು ಬೇಕಿತ್ತಾ?” ಅಂತ ಹಂಗ್ಸೊ ಜನ್ರು, ಶಾತಂ ಪಾಪಂ ಅನ್ನೊಷ್ಟ್ರಲ್ಲಿ ಒಳಗಡೆ ಇಂದ 14th cross ನಾ ಅಯ್ಯಂಗಾರ್ ಮನೆಯ ಇಬ್ಬ್ರು ಮಕ್ಕ್ಳು ತೇಗುತ್ತಾ ಆಚೆ ಬಂದದ್ದು ಒಂದು cultural shock ಹಾಗು news ಆಗಿತ್ತು.

“ಬೆಂಗಳೂರು ನಿಜವಾಗಿಯೋ ಬದಲಾಗ್ತಿತ್ತು..” ಗ್ರಂದಿಗೆ ಅಂಗಡೀ ಇವತ್ತಿಗೆ super market ಆಗಿ talkies ಇಂದಿಗೇ Multiplex ಆಗಿ ಪರಿವರ್ತನೆಗೊಂಡಿದ್ದು ಅನಿವಾರ್ಯ!

ಆನಂದ, MES school ನಲ್ಲಿ ೪ ನೇ ತರಗತಿಯಲ್ಲಿ ಓದುತ್ತಿದ್ದ, ಆನಂದನ ಮನೆ ೧೩ ನೇ cross ನಲ್ಲಿ second left ತೊಗೊಂಡ್ರೆ ಅರಳಿ ಕಟ್ಟೆ ಒಂದರ diagonally opposite ಇತ್ತು, ಇದೇನಪ್ಪಾ ಬೆಂಗಳೂರಿನಲ್ಲಿ ಅದೂ ಮಲ್ಲೇಶ್ವರಂ ನಲ್ಲಿ ಆರಳಿ ಕಟ್ಟೆ ಅಂತ ಆಶ್ಚರ್ಯ ಪಡೊದಿಕ್ಕಿಂತ ಮುಂಚೆ ಆ ಕಟ್ಟೆಯ speaciality ತಿಳೀಸ್ಲೇಬೇಕು, ಕಟ್ಟೆಯ ಎಡಕ್ಕೆ ವೈಷ್ನವರ ನಾರಾಯಣನ ದೇವಸ್ತಾನ ಹಾಗು ಬಲಕ್ಕೆ ಶೈವರ ಶಿವನ ದೇವಸ್ಥಾನವಿತ್ತು, ಕಟ್ಟೆ ವೈಶ್ನವರ್ದೊ ಅಥವಾ ಶೈವರ್ದೊ? ಅಂತ ಪ್ರಾರಂಭವಾದ ಜಗಳ supreme court ಗೆ ಹೊಗಿ, “ಕಟ್ಟೆ ಇದ್ದಂಗೆ ಇರ್ಬೇಕು ಅನ್ನೋ stay order ಇಂದ ಇವತ್ತಿಗೂ ಹಾಗೆ ಉಳ್ಕೊಂಡಿದೆ”

ಕಟೆಯ ಎಡಕ್ಕೆ ನಾಮವಿಟ್ಟು ಪೂಜೆ ಮಾಡಿ ವೈಷ್ನವ್ರು ಹೋದ್ರೆ, ಬಲಕ್ಕೆ ವಿಬ್ಬೂತಿ ಇಟ್ಟು “ಒಂ ನಮ ಶಿವಾಯ” ಅಂತ ಬರೆದು ತಮ್ಮ involvement ನಾ ಶೈವರು prove ಮಾಡ್ತಿದ್ದ್ರೂ, ದೊಡ್ಡ communal violence ನಾ create ಮಾಡಿದ್ದ ಆ ಕಟ್ಟೆ ಆನಂದನ identityಊ ಕೂಡಾವಾಗಿತ್ತು, “ಕಟ್ಟೆ ಆನಂದ” ಅಂದ್ರೆ ಇಡೀ 13th cross ಗೇ famousಊ, ೧೩th cross ಅಲ್ಲಿ ಸುಮಾರು ೨೦ ಮನೆಗಳಿದ್ದ್ವೂ, ಎಡವಿ ಬಿದ್ದ್ರೆ schoolಊ ಇದ್ದಿದ್ರಿಂದ ಆನಂದನ ಪ್ರಪಂಚ ತುಂಬಾ ಸೀಮಿತವಾಗಿತ್ತು. ಸಾಯಂಕಾಲ ಮಲ್ಲೇಶ್ವ್ರಂ grounds ಅಲ್ಲಿ ಆಟಾ, ಸುಸ್ತಾಗಿ ಹಸಿವಾದ್ರೆ ಅಣ್ಣಪ್ಪನ sweet ಪಾನಿ ಪುರಿ, CTR ದೊಸೆ, week ends ಅಲ್ಲಿ macdonalds ನಾ cheese burger ಮತ್ತು ಸಿನಿಮಾ.

ಪನ್ನೀರ್ ಸೆಲ್ವಂ, ಶ್ರುತಿ, ಬಿಜು, ಕಮಲ್, ಗಾಯ್ತ್ರಿ ಹಾಗು ಮನೊಜ್ 13th cross ನಾ gang members, ಎಲ್ಲ್ರೂ ಹೆಚ್ಚು ಕಮ್ಮಿ ಒಂದೇ ವಯಸ್ಸು ಹಾಗು schoolಊ. ಒಂದ್ ಸಲೀ ಹಲ್ಲಿ ಒಂದನ್ನು ಗೊಡೆ ಮೆಲಿಂದ ball ಇಂದ ಹೊಡ್ದು ಹಾರಿಸಿದ್ದ ಆನಂದ ತನ್ನ ಧೈರ್ಯ್ವವನ್ನು ತಾನೆ ಮೆಚ್ಚಿ ಸ್ವಯಂ ಘೊಷಿತ gang leader ಆಗಿದ್ದ. ಹೊಸ್ದಾಗಿ ಸೆರ್ಕೊಂಡ ಮನೊಜ್, ಆನಂದನ atrocity ಯನ್ನು ಪ್ರಶ್ನಿಸಿದ್ದಾಗ

“ಯಾಕೊ ಮರಿ, ಹಲ್ಲಿ ಪ್ರಹಸಾನ ಮರೆತುಹೊಯ್ತಾ? ಅಂತ ಅವಾಜ಼್ ಹಾಕಿ, rubber ಹಲ್ಲಿಯೊಂದನ್ನು ಮನೊಜ ನ ಮೇಲಿ ಹಾರಿಸಿ ತನ್ನ power ಅನ್ನು ನಿರೂಪಿಸಿಕೊಂಡಿದ್ದ. ಆನಂದನ ತಂದೆ bank ಒಂದ್ರಲ್ಲಿ manager ಆಗಿದ್ದ್ರೂ, Software engineer ಆಗ್ಲಿಲ್ಲ್ವಲ್ಲಾ ಅನ್ನೊ guilt ಅವರಿಗೆ ಇತ್ತೂ, ಆನಂದನ ತಯಂತೂ, ಅವನ leadership qualities ನೋಡಿ ಅವನೂ ವಾಟಾಳ್ ಪಕ್ಶನೇ ಸೇರೋದು ಅಂತ decide ಮಾಡಿ ಸ್ವಲ್ಪ social science ಜಾಸ್ತಿನೇ ಓದುಸ್ತಿದ್ದ್ರೂ

೧೩ cross ನಲ್ಲಿ ಇರೋ 20 ಮನೆಯವರಿಗೇ ಮತ್ತೊಂದು ಕಾಡೋ ವಿಶಿಯವೆಂದರೆ ಅವಾವಾಗ ಆಗ್ತಿದ್ದಾ ಸಣ್ನ ಪುಟ್ಟ ಕಳತನಗಳು. ಚೊಂಬು, cycle chainಊ, petrol, ಚಪ್ಲಿ ಹೀಗೆ ದಿನ ದಿನಕ್ಕೂ ಕಳ್ಳತನದ ಪ್ರಮಾಣ ಹೆಚ್ಚುತ್ತಿತು, ಪೊಲಿಸರಿಗೆ ದೂರು ಕೊಟ್ಟ್ರೆ, inspector ನಗುತ್ತಾ ಬಿರಿಯಾನಿ ತಿನುತ್ತಾ “ನನ್ನ ಮನೇಲೆನೇ ಚಪ್ಪ್ಲಿ ಕಳ್ತನಾ ಆಯ್ತು..ನೆನ್ನೆ..” ಅಂತ ದುಡೂಂ ಅಂತ ತೇಗಿದ್ದರೂ.

ಕಟ್ಟೆಯ ಗಳಾಟೆಇಂದಾಗಿ “ದೇವ್ರಿಗೆ ಕೋಪಾ ಬಂದಿದೆ, “ಕಟ್ಟೆ ಶಾಂತಿ ಮಾಡಿಸ್ಲೇಬೇಕು” ಅಂತ ಪುಡಾರಿ ಜ್ಯೊತಿಷಿ ಒಬ್ಬorder ಮಾಡೀದ್ದ. “ಮಾಡ್ಸೊಣ ಅಂದ್ರೆ ಕೊಪ ಬಂದಿರೋದು ಶಿವನಿಗೊ ಅಥ್ವಾ ನಾರಾಯಣನಿಗೊ?” ಎಂಬ ಪ್ರಶ್ನೆಗೆ ಜ್ಯೊತಿಷಿ “no comments” ಅಂತ ಮುಖ ತಿರಿಸ್ಕೊಂಡು bank account details ಕೊಟ್ಟು online transfer ಮಾಡಿ ಅಂತ ಗಾಡಿ ಕಿತ್ತಿದ್ದ.

“risk ಏ ಬೇಡಾ ಅಂತ ಶೈವರು, tension ಯಾಕೆ ಅಂತ ವೈಶ್ನವರೂ” ಜಬರ್ದಸ್ತಾಗಿ ಹೊಮಕ್ಕೆ ಸಿದ್ದತೆ ಮಾಡಿಕೊಂಡು ಕೂತಾಗ, ದೇವರ ಬೆಳ್ಳಿ ಚೊಂಬೇ ಕಳತನವಾಗಿ ಹೊಮಕ್ಕೆ ಮಳೆ ಸುರಿದಂತಾಗಿತ್ತು.

ಅವತ್ತು ಸುಮಾರು 8:20, ಆನಂದ school ಗೆ ಹೊಗೊ ಗಡಿಬಿಡಿಯಲ್ಲಿ ಹೊರಗಡೆ ತನ್ನ pencil ಅನ್ನೂ ಚೂಪು ಮಾಡಿಕೊಳುತ್ತಿದ್ದಾ. ತಕ್ಶಣ ಅವನ ಕಣ್ಣಿಗೆ ಆಶ್ಚರ್ಯದ ಸಂಗಿತೊಯೊಂದು ಸೆಳಿತೂ, ಕಟ್ಟೇ ಮೇಲೆ ಒಬ್ಬ ಉದ್ದನೇ ದಾಡಿ ಬಿಟ್ಟುಕೊಂಡು, ವಿಕಾರವಾದ ಅಂಗಿಯನ್ನು ಧರಿಸಿ, ಮುರಿದು ಹೊದ ತಟ್ಟೆಯೊಂದರದಲ್ಲಿ ಅನ್ನ ಮುಕ್ಕುತ್ತಾ ಅತ್ತ ಇತ್ತಾ ನೋಡುತ್ತಾ ನಾಯಿಯೊಂದನ್ನು ಮಾತ್ತಡಿಸುತ್ತಾ ಜೊರಾಗಿ ನಗುತ್ತಿದ್ದ, ಮನುಶ್ಯನ್ನನ್ನು ಕಂಡೂ ಆನಂದ “ಅಮ್ಮಾ” ಅಂತ ಕಿಟಾರ್ ಅಂತ ಕಿರುಚಿ ಒಳಗೆ ಓಡಿದಾ.

ಮನೆಯ ಹಿರಿಯರು ಆಚೆಗೆ ಬಂದು ಕಟ್ಟೆಯ ಮನುಶ್ಯನ್ನನು ನೋಡಿ, ಅನುಮಾನದಿಂದ ಬಾಗ್ಲನ್ನು ಹಾಕಿಕೊಂಡು “ಪಿಸ ಪಿಸ” ಅಂತ ಮಾತಡಿಕೊಂಡರು..”firstಊ school ಗೇ ಹೊಗು” ಅಂತ ಗದರಿಸಿ ಮಕ್ಕ್ಳನ್ನೂ school ಗೆ ಕಳುಹಿಸಿ 13 cross ನಾ ದೊದ್ದವರೆಲ್ಲಾ ಒಂದು immediate emergency meeting ಕರದ್ರೂ.

“ಶಿವನಿಗೆ ಬಿಟ್ಟ ಕೊಟ್ಟಿದ್ರೇ ಈ ಗತಿ ಬರ್ತಿರ್ಲಿಲ್ಲಾ..” ಅಂತ ಪ್ರಾರಂಭವಾದ discussion ಮತ್ತೇ ಅದೇ ಹಳೇ ಜಗಳದಲ್ಲಿ ಮುಳುಗೊಯ್ತು, “ಇವಾಗ ಎಲ್ಲ್ರಿಗೋ office ಗೆ time ಆಗ್ತಿದೆ ಸಾಯಂಕಾಲ ನೊಡೋನ, ಮನೆ ಹೆಂಗಸರೆಲ್ಲಾ ಯಾವ್ದುಕ್ಕೂ ಬಾಗ್ಲನ್ನು ಹಾಕೋಂಡೆ ಇರ್ಲಿ, ಮಕ್ಳು school ಇಂದ ಬಂದ್ಮೇಲೆ ಮನೇಲಿ ಇರ್ಲಿ, office ಇಂದ ಬಂದ್ಮೇಲೆ ಏನು ಏತ್ತಾ ಅಂತಾ ವಿಚಾರಿಸೋಣಾ.” ಅಂತ ಅಪರೂಪವಗಿ ಒಮ್ಮನ್ನಸ್ಸಿನಿಂದ decide ಮಾಡೀ ಯೆಲ್ಲ್ರೂ ಹೊರಟ್ರೂ.

ಆನಂದನಿಗೆ school ಅಲ್ಲಿ ಆ ಕಟ್ಟೆ ಮನುಶ್ಯನದೇ tensionಊ, lunch break ಅಲ್ಲಿ ಪಕ್ಕದ class ನಾ, ಅದೇ ಬಿದಿಯಲ್ಲಿ ಇರೊ ಗಯತ್ರಿನಾ ಕರೆದೂ “ಯೆನ್ ಅನ್ಸುತ್ತೆ ಯಾರ್ ಇರ್ಬಹುದು? ದೊಡ್ದ ಕಳ್ಳನಾ?” ಅಂತ ಕುತೂಹಲಕಾರಿ ಪ್ರಶ್ನೆ ಹಾಕಿದ್ದ, ಯಾವಗ scholl bell ಹೊಡೆದು ಮನೆಗೆ ಹೊಗ್ತಿನೋ ಅಂತ ಕಾತುರದಿಂದ ಕುಳಿತಿದ್ದ ಆನಂದ, bell ಹೊಡೆದ ಕೂಡಲೆ school gate ಬಳಿ ಅಮ್ಮನ ಕಂಡು

“ಇನ್ನೂ ಇದಾನ?” ಅಂತ ಪ್ರಶ್ನಿಸಿದ್ದಾ

“ಯಾರೊ?” ಅಮ್ಮ ಕೇಳಿದರೂ..

“ಅದೇ ಆ ಕಟ್ಟೆ ಮನುಶ್ಯಾ?”

“school ಅಲ್ಲಿ ಏನ್ ಮಾಡ್ಸದ್ರೂ?” ಆನಂದನ ತಾಯಿ ಮಾತನ್ನು ತಿರುಗಿಸಿದಿರೂ..

“ದೆವ್ವಾ ಆಂತೇ, ಗಾಯತ್ರಿ ಹೇಳದ್ಲೂ..” ಅಂತ ಆತಂಕದಿಂದ ಮತನ್ನು ತಿರಿಗ ಅಲ್ಲಿಗೆ ತಂದು ನಿಲ್ಲಿಸಿದ..

“ಬಾಯ್ ಮುಚ್ಕೊಡೂ ಬಾ.. ಇವತ್ತು ಆಚೆ ಆಟ ಇಲ್ಲಾ..” ಅಂತ ಗದರಿಸಿ ಆನಂದನ ತಾಯಿ  ಅವನ ಮಾತಿಗೆ ಕಡಿವಾಣ ಹಾಕಿದ್ರೂ.

ಮನೆ, ಹತ್ರಾ ಬರ್ತಾ ಆನಂದ ನಿಧಾನವಾಗಿ ಹೆಜ್ಜೆ ಹಾಕುತ್ತಾ, ಕಲ್ಲುಗಳನ್ನು ಸಂಗಡಿಸುತ್ತಾ ಬೇಕಂತನೇ ಅಮ್ಮನ ಹಿಂದ್ ಹಿಂದೆ ಬರುತ್ತಿದ್ದನು, “ಬೇಗ ಬರೊದುಕ್ಕೆ ಏನ್ ಗೋಳು?” ಅಂತ ಗದರಿಸಿದ ಆಂದನ ಅಮ್ಮ ಅವನ್ನನ್ನು ಸರಸರನೆ ಒಳಗೆ ಕರೆದುಕೊಂಡು ಹೊಗಿ ಬಾಗ್ಲ್ನನ್ನು ಹಾಕಿದ್ದ್ರು. ಆದ್ರೆ ಆನಂದನಿಗೆ ಅದೇನೊ ಕುತೂಹಲ, ಬೇಡ್ದ್ದೆ ಇರೋ ಅತಿಥಿಯನ್ನು ಕಾಣಲು ಅವನ ಹಂಬಲ ತುಂಬಿ ಹರಿಯುತ್ತಿತ್ತು, ಆನಂದನ ಮನೆಯ ಅಡಿಗೆ ಮನೆಯಿಂದ ಆ ಕಟ್ಟೆ ಕಾಣಿಸುತ್ತಿತ್ತು, ಇದನ್ನು ಅರಿತ ಆನಂದ ಅಕ್ಕಿ ಮೂಟೆಯನ್ನು ಸರಿಸಿ ಅದರ ಮೇಲೆ ಡಾಲ್ಡ carton box ಅನ್ನು ಇಟ್ಟು, ಅದರೆ ಮೇಲೆ ನಿಂತು ಕಿಡಿಕಿಯಿಂದ ಇಣುಕಿ ಆ ಕಟ್ಟೆ ಮನುಶ್ಯನನ್ನು ನೊಡುತ್ತಾ ನಿಂತ! ಬೆಳೆಗೆಯಿಂದ ಎಲ್ಲರಾ ಆತಂಕಕ್ಕೆ ಒಳಗಾದ ಆ ಗಡ್ಡದ ಮನುಶ್ಯ paper ಗಳನ್ನು ಹಾಸಿ ಮಲಗಿದ್ದ, ಬಾಯಿಂದ ಜೊಲ್ಲು ಸುರಿಸುತ್ತಾ ಮೈ ಕಾಲುಗಳನ್ನು ಕೆರೆಯ್ತುತ್ತಾ ಇತ್ತ ಕಿಡಿಕಿ ಕಡೆ ತಿರುಗಿದ, ಆನಂದ ಹೆದುರಿ ತನ್ನ ರೂಂ ಹತ್ತಿರ ಓಡಿ ಪಕ್ಕದ ಮನೆಯ ಸೆಲ್ವಂನ್ನಾ ಕೆರೆದು ಕಿಡಿಕಿ ಇಂದಲೆ

“ಸೆಲ್ವ ನೋಡ್ಯ್ಯಾ, ಭಯಂಕರವಾಗಿದಾನೆ!” ಅಂತ ಪಿಸುಗುಟ್ಟಿದ

“ಯಾರಂತೆ, ಅಮ್ಮಾ ಇವತು ಆಟಾ ಇಲ್ಲಾ ಅಂತ ಕೂರಿಸಿದಾಳೆ…” ಅಂತ ತನ್ನ ದು:ಖವನ್ನು ಸೆಲ್ವ ತೋಡಿಕೊಂಡ

“ಗಾಯತ್ರಿ ಹೇಳುದ್ಲೂ, ದೆವ್ವಾ ಅಂತೆ..” ಅನಂದ ಉತ್ತರಿಸಿದ..

“ಕಾಲ್ ಇತ್ತಾ?” ಪ್ರಶ್ನಿಸಿದ ಸೆಲ್ವಾ

“ಭಯಾ ಆಗುತ್ತೊ…ಆದ್ರೆ ಕಾಲ್ ಇತ್ತು.. ಕಾಲ್ ಇದ್ದ್ರೇ?” ಆತಂಕದಿಂದ, gang leader ಆನಂದ ತನ್ನ ಭಯವನ್ನು ತೊಡಿಕೊಂಡ…

ಇದನ್ನು ಕಂಡ ಸೆಲ್ವಾ.. ಇದೇ chance ಅಂತ…

“ಲೋ ಹಲ್ಲಿನೇ ನೀನು ball ಇಂದ ಹೋಡ್ದು ಓಡಿಸ್ದ್ವನು..ಇದೇನ್ ಮಹಾ?” ಅಂತ ಧೈರ್ಯದ ಮಾತುಗಳನ್ನು ತನ್ನ gang leader ಗೇ ಅರ್ಥವಾಗುವಂತೆ ಬಿಡಿಸಿ ಹೇಳ್ದ..

ಸಾಂಯಕಾಲ ಆಗುತ್ತಲೇ areaದಾ ಎಲ್ಲಾ ಹಿರಿಯರು ಬಿಜು ಮನೆ ಮಾಡಿ ಮೇಲೆ hall ನಲ್ಲಿ ಸೇರಿದರು, ತಮ್ಮ area ಗೆ ಬಂದ ಅನಿರೀಕ್ಶಿತ ಅತಿಥಿಯನ್ನು handle ಹೆಂಗೆ ಮಾಡೊದು ಅನ್ನೊ meeting ಕರೆದ ಪ್ರಸನ್ನ ಮಸ್ಟರ್, area ದ president ಕೂಡ ಆಗಿದ್ದ್ರೂ.

ಮಕ್ಕಳೂ ಕಡ್ದಾಯವಾಗಿ ಬರಕೂಡ್ದೂ ಅಂತ strict order ಆಗಿದ್ದ್ರೂ ಆನಂದ ಮತ್ತು gang ಬಿಜು ಮನೆಯಲ್ಲಿ ಆಟಾ ಆಡೋ ನೆಪದಲ್ಲಿ meeting hall ನಾ ಕಿಡಿಕಿ ಹತ್ತಿರ ಆಡಗಿಕೊಂಡಿದ್ದರು

“ಯಾರಾರ್ದು ನೊಡದ್ರೆ?” ಕೆಳಿದ್ದ ಬಿಜು..

“ಲೊ! ನಾನ್ ಇದೀನ್ ಬಾರೊ…..” ಅಂತ ಆಶ್ವಾಸನೆ ಕೊಟ್ಟ ಆನಂದ್ ತನ್ನ ಕಿಯಿವನ್ನು ಗೋಡೆಗೆ ಹೊಡ್ದಿದ್ದನು..

ಅಲ್ಲಿ metting ಪ್ರಾರಂಭಯಾಯ್ತು..

’ವೈಶ್ನವರೇ ಯಾವ್ದೊ ಮಠದಿಂದ ಕರೆದುಕೊಂಡು ಬಂದು ಬಿಟ್ಟಿರೋದು’ ಅನ್ನೂದಿಕ್ಕೆ, ’ಅವ್ನ ಮುಖ ನೋಡದ್ರೆ ಗೊತ್ತಾಗೊಲ್ವಾ ಕೇದಾರದ ಅಘೊರಿ ಬಾಬ ಅವ್ನು, ಇದು ಶೈವರ ಕೆಲ್ಸ’ ಅನ್ನೊ reaction ಮಧ್ಯದಲ್ಲಿ.. meeting ಗದ್ದಲ ಆಗಿ coffee ಚೆಲ್ಲಿ ಒಂದು ಸಣ್ಣ assembly ಆಗ್ತೀರ್ವಾಗ ಪ್ರಸನ್ನ ಮಾಸ್ಟರ್ “stop it” ಅಂತ ಜೊರಾಗಿ ಕಿರುಚಿದರು..

ಒಂದು ಕ್ಶಣ silent ಆಗಿ ಮತ್ತೆ.. ಶುರು ಮಾಡೊ ಆಷ್ಟ್ರಲ್ಲಿ, ಪ್ರಸನ್ನ ಮಾಸ್ಟರ್ “ಇದೂ ಮುಲ್ಲಾಮ್ ಸಾಬನ್ ಕೆಲ್ಸ” ಅಂತ declare ಮಾಡದ್ರೂ..

ಮುಲ್ಲಾಮ್ ಸಾಬ ಪಕ್ಕದ್ ಬೀದಿಯಲ್ಲಿ ವಾಸವಾಗಿದ್ದ, ಮುಲ್ಲಾಮ್ ಯಾರಿಗೋ ಏನೂ ಕಾಟಾ ಕೊಡ್ತಿರ್ಲಿಲ್ಲಾ ಆದ್ರೂ ಒಂದ್ ಸಲಿ MLA election declare ಆದಾಗ EX-MLA ಮುಂದೆ, “ಯೆನ್ ಸ್ವಾಮಿ ಹಿಂದು ಹಿಂದು ಗೇ ಜಗ್ಳಾ ಆಡೋದು?” ಅಂತ ಪ್ರಶ್ನಿಸಿ ಕೆಕೆ ಕೆಕೆ ಹಾಕೊಂಡು ನಕ್ಕೀದ್ದಕ್ಕೆ ಮುಲ್ಲಮ್ area ದಾ undelcared villain ಆಗ್ಬಿಟ್ಟೀದಾ.

ಪ್ರಸನ್ನ ಮಾಸ್ಟರ್ ಹೇಳಿದ್ ಕೋಡ್ಳೆ ಯೆಲ್ಲಾರೂ.. “right! correctಊ” ಅಂತ ವಿಚಾರ ಮಾಡಿ.. ತಮ್ಮ ತಮ್ಮ ಕಲ್ಪನೆಯ ಕಥೆಯನ್ನು ಕಟ್ಕೊಂಡು “ಇದು ನಿಮ್ಮ ಕಟ್ಟೆ ತಾನೆ ಇಶ್ಟ ಇದ್ದ್ರ‍ೇ ನೀವೆ ಓಡ್ಸ್ಸೀ ಅವ್ನಾ..” ಅನ್ನೊ ಮಾತುಗಳನ್ನು ಕೇಳಿಸಿಕೊಂಡ ಆನಂದ ಒಮ್ಮೆ ಬಿಜು ಹಾಗು ಮನೊಜನ ನೊಡಿ..

“ಏನೊ ಇವ್ರು ಮಕ್ಕಳ ತರಾ ಆಡ್ತಾರೆ..’ ಅಂದುಬಿಟ್ತಾ

ಅವತ್ತು ಅವನ ಮಾತಿಗೆ ಅದೆಷ್ಟು ಅಡಗಿದ ಅರ್ಥವಿತ್ತೊ!

ನಿದ್ದೆಯಂತೂ ಕೆಟ್ಟಿತ್ತು, ರಾತ್ರೆಯೆಲ್ಲಾ ಗಂಟೆಗೊಮ್ಮೆ ಎದ್ದು ಅಡುಗೆಮನೆಯಿಂದ ಕಟ್ಟೆ ಮನುಶ್ಯನ್ನನು ನೊಡುತ್ತಾ, ಅಮ್ಮ ಕೋಗ್ದಾಗ “ನೀರ್ ಕುಡಿಯೋಕೆ ಬಂದೆ..” ಅಂತ ಕಥೆ ಹೊಡೆಯುತ್ತಿದ್ದಾ..ರತ್ರೆ ಪೂರ್ತಿ ಆ ಮನುಶ್ಯ ಕಟ್ಟೇ ಮೇಲೆ ಕೋತು ಹಾಗೆ ತೂಗುಳ್ಸ್ತಿದ್ದ. ಆನಂದನ ಪ್ರಪಂಚ ಅಂದು ಯಾಕೊ ತುಂಬಾ ಅಸಹಾಯಕತೆಯಿಂದ ಮೂಡಿತ್ತು.

ಬೆಳೆಗೆ ಎದ್ದ ಕೋಡಲೆ ಮನೆ ಆಚೆ ಹೊಗಿ ಇಣಿಕಿ ನೊಡಿ, ಕೋಲಂಕುಶವಾಗಿ bank rate of interest ಕಡಿಮೆಯಾಗಿರೊ news ಓದುತ್ತಿದ್ದ ಅಪ್ಪನ ಹತ್ರ ಹೊಗಿ, “ಇನ್ನೂ ಇದಾನೆ ಅಲ್ಲೆ…” ಅಂತ ವರದಿ ಒಪ್ಪಿಸಿದ್ದ.

“ನಿನ್ನಾ ಕೇಳದ್ನಾ?” ಗದರಿಸಿದ ಅಪ್ಪಾ.. “ನೆನ್ನೆ ರಾತ್ರೆ ಪೊರ್ತಿ ಅಡಿಗೆ ಮನೆಲಿ ಯೆನ್ ಮಾಡ್ತಿದ್ದೆ?” ಅಂತ ಪ್ರಶ್ನೆಸಿದ್ದರೂ.

“ಬೆರೆಯವರ ಮನೆ ವಿಶಿಯಾ ತುಂಬಾ important ಇವ್ನಿಗೇ”, ಅಮ್ಮನ ಶಬ್ದ ಇವನ ಮಂಗಳಾರತಿಗೆ ಕರ್ಪೂರವಾಯ್ತು.. ಇನ್ನು ಇಲ್ಲೆ ಇದ್ದ್ರೆ ಪೂಜೆ gurantee ಅನ್ನೊದನ್ನ ಅರಿತು, ಆನಂದ “ಸ್ನಾನ ಮಾಡಕ್ಕ್ ಹೋಗ್ತೀನಿ” ಆಂತ ಹೇಳಿ ಜಾಗ ಕಿತ್ತಾ

“sciene ಅಲ್ಲಿ” just paas ಆಗಿದ್ಯಂತೆ?” ಅನ್ನೊ ಅಪ್ಪನ ಪ್ರಶ್ನೆ ಕಿವಿಗೆ ಬಿದ್ದೇಲ್ವೇನೋ ಅಂದಹಾಗೆ.. ಬಚ್ಚಲಮನೆ ಕಡೆ ಓಡಿದ, ಒಳಗಡೆಯಿಂದ, ಅಮ್ಮ “school ಬಿಡ್ಸಿ ಆ ವಾಟಾಳ್ ಪಕ್ಶಕ್ಕೆ ಸೇರ್ಸಿ.. ಸುಮ್ನೆ ದುಡ್ಡು wasteಊ, ನೆನ್ನೆಯಿಂದ ಬರೀ ಆ ಮನುಶ್ಯಂದೆ ಚಿಂತೆ ಸಾಹೆಬ್ರಿಗೇ” ಅಂದರು.

“ಪ್ರಸನ್ನ ಮಾಸ್ಟರ್ responsibility ತೊಗೊಂಡಿದ್ದಾರೆ..”

“ಊಂ ತೊಗೊತ್ತಾರೆ, ಮಣ್ಣು, ಅವ್ರ ಮನೆ ಮುಂದೆ ಯಾವನೋ ಬಂದ್ ಕೂತ್ರೆ ಗೊತಾಕ್ತಿತ್ತು.. ನೀವು ಇವ್ರನ ನೆಚ್ಕೊಂಡ್ರೆ ಕಟ್ಟೆ case ತರ ವರ್ಷಾ ಪೂರ್ತಿ ಎಳಿತ್ತಾರೆ” ಅಂತ ಹೇಳ್ ಮುಗ್ಸೊಷ್ಟಿಗೆ ಆನಂದನ ತಂದೆ ಸಿಡುಕುತ್ತಾ

“ಈಗಾ ಏನ ಮಡೂ ಅಂತ್ಯಾ?” ಅಂತ ಕೇಳಿದರು

“ಯಾರು, ಯೇನೂ ಅಂತ ವಿಚರ್ಸಿ..” ಅನ್ನೊ ಬುದ್ದಿ ಮಾತು ಆನಂದನ ತಾಯಿ ಗಂಡನಿಗೆ ತಿವಿದು ಹೇಳಿದರು..

“ಬಿಜು ಅಪ್ಪ ಇವತ್ತು walking ಅಲ್ಲಿ ಸಿಕ್ಕಿದ್ದ್ರೂ, mostly ಇಷ್ಟು ದಿನಾ ಆಗ್ತಿರೋ ಕಳ್ಳತನಕ್ಕೆ ಇವ್ನೇ ಕಾರಣ, ಇವಾಗ ಯಾವ್ದೊ ದೊಡ್ ಕನ್ನಾ ಹಾಕೊ planಊ, observe ಮಾಡೋಕ್ಕೆ ಬಂದ್ ಕೂತಿದಾನೆ ಅಂತ ಹೇಳಿ” ಹೆಂಡತಿಯ ಬೆವರನ್ನು ಆನಂದನ ತಂದೆ ನಿರಾಯಾಸವಾಗಿ ಇಳಿಸಿದರು

“office ಗೆ ರಜೆ ಹಾಕಿ ಇಲ್ಲೇ ಮನೆಲಿ ಇರಿ..” ಅಂತ ಪೀಡ್ಸೊಕ್ಕೆ ಶುರು ಮಾಡಿದಕ್ಕೆ” “ಸಾಂಕಾಲ police station ಗೆ ಹೋಗಿ compliant ಕೊಟ್ಟು ಬರ್ತೀನಿ, ಮನೆಲಿ ಬಾಗ್ಲ ಹಾಕೊಂಡು ಇರೂ..” ಅನ್ನೊ ಆಶ್ವಾಸನೆ ಕೊಟ್ಟು paper ಮಡ್ಚಿ ಆನಂದನ ತಂದೆ ಎದ್ದರು.

ಬಚ್ಚಲ್ ಮನೆಯಲ್ಲಿ ಆನಂದ ಎಲ್ಲವನೂ ಕೇಳ್ಸ್ಕೊಂಡು..

“ಕಳ್ಳನಾ? ನನ್ನ cycleಊ?.”

“ನೆನ್ನೆ ರಾತ್ರೆ ನೇ ಯಾಕ್ ಕದಿಲಿಲ್ಲಾ..”

“ಇಲ್ಲಾ ಕಳ್ಳಾ ಇರಕಿಲ್ಲಾ…”

“ಆದ್ರೆ ಬಿಜು ಅಪ್ಪಾ ಹೇಳಿದ್ದು?..”

ಹೀಗೆ ಒಬ್ಬ್ನೆ ಮಾತಾಡ್ಕೊಂಡು schoolಏ ಮರ್ತಿದ್ದ ಆನಂದ..

“ಯೆನೋ ಅದೂ ಗುಸು ಗುಸು?” ಅಂತ ತಟ್ ಅಂತ ಬಾಗ್ಲನ್ನು ತೆಗೆದ ಅವನ ಅಮ್ಮ ಆನಂದನ ಸಂಕೊಚಕ್ಕೆ ಆಹುತಿಯಾದರು..

ಮತ್ತೇ ಅದೇ school, ಅದೇ ಆತಂಕ, ಅದೇ ಪ್ರಶ್ನೆಗಳು, ದಿನಗಳು ಕಳೆದವು, police ರೂ “ಅವ್ನು ಯೆನಾದ್ರೂ ಮಾಡದ್ರೆ ಬಂದ್ ಹೇಳ್ರಿ” ಅಂತ್ ಖಡಕ್ಕಾಗಿ ಹೇಳಿದರು. ಗಡ್ಡದ ಮನುಶ್ಯ ದಿನಾ ಬೆಳಗ್ಗೆ ಎದ್ದು ಮಜವಾಗಿ 13th cross ಉದ್ದಕ್ಕೂ ನಡಿಯುತ್ತಾ, ಅಲ್ಲೆ ಪಕ್ಕದಲ್ಲಿದ BBMP ತೊಟ್ಟಿಯಲ್ಲಿ ಆಯ್ದು ತಿಂದು ತೇಗಿ ಮಲಗಿ ಮತ್ತೆ ಸಾಂಕಾಲ ಮತ್ತೊಂದು ಸಲಿ walking ಮಾಡಿ ಅದೇ ತೊಟ್ಟಿಯಲ್ಲಿ ಕೈ ಹಾಕಿ ತಿಂದು ರಾತ್ರೆ ಪೂರ್ತಿ ಕಣ್ ಕಣ್ ಬಿಡುತ್ತಾ ಕುಳಿತಿರುವನು.

ಕಟ್ಟೆ ನಿಧಾನವಾಗಿ ಅವನ ಸಂಖೇತವಾಗುತ್ತಿತ್ತು, ಕೆಲವರು ಅವ್ನಿಗೆ “ಕಟ್ಟೆ ಬಾಬ” ಎಂಬ ನಾಮಾಂಖನ ಮಾಡಿದರು, ಆದ್ರೆ ಯಾರಿಗೂ ಅವನ ಹತ್ತಿರ ಹೋಗಿ ಮಾತಾಡ್ಸಿ, ವಿಚಾರಿಸೊ ಧೈರ್ಯ ಇರಲಿಲ್ಲಾ. “ನಮಕ್ಗ್ಯಾಕೆ ಅಂತ?” ಸುಮ್ಮನೆ ಕುಳಿತರು.

ಆನಂದನಿಗೆ ಇವಾಗ ಒಂದು ವಿವಿಧ complextion ಹುಟ್ಟಿಕೊಂಡಿತ್ತು. “ಕಟ್ಟೆ ಆನಂದ” ಅಂತಾನೆ famous ಆಗಿದ್ದವನಿಗೆ “ಕಟ್ಟೆ ಬಾಬ” ನಾ cmpetation ಹಿಡಿಸ್ಲಿಲ್ಲಾ. ಮನೊಜನಂತು ಆನಂದನನ್ನು ಹಾಸ್ಯ ಮಾಡೀ ಪುಸುಕ್ ಅಂತ ನಕ್ಕು ಇನ್ನೂ ಅವಮಾನಿಸಿದ್ದ. ಆನಂದನಿಗೆ ಕೊಪ ನೆತ್ತಿಗೇರಿತ್ತು, “ಯಕೊ ಹಲ್ಲಿ ಪ್ರಹಸನಾ..” ಅಂತ ಶುರು ಮಾಡಿ ಮುಗಿಸುವಷ್ಟರಲ್ಲಿ ಮನೊಜ “ಸಾಕ್ ಮಾಡು ಕಂಡಿದ್ದೀನಿ, ಮೊದ್ಲು ಕಟ್ಟೆ ಬಾಬನಾ ಓಡ್ಸೂ” ಅಂತ ಸವಾಲು ಹಾಕಿದ್ದ. ತನ್ನ gang leader ಗೆ ಅವಮಾನ ಆಗಿದನ್ನು ತಡಿಯೊಕ್ಕೆ ಆಗ್ದೆ ಬಿಜು “ಯಾಕೊ ಇಷ್ಟ ಇದ್ದ್ರೇ ನೀನೆ ಹೊಗಿ ಓಡ್ಸು..” ಅಂತ ಮರು ಸವಾಲ್ ಹಾಕಿ gang ಅಲ್ಲಿ gang war ಒಂದನ್ನು ಶುರು ಮಾಡಿದ್ದಾ.

ಕಿರುಚಿತ್ತಾ, ಅರಚುತ್ತಾ, ನೂಕುತ್ತಾಇರುವಾಗ ಗಾಯತ್ರಿ ಬಂದು

“ಸಾಕ್ ನಿಲ್ಲ್ಸ್ರೋ ಅದೇನ್ ದೊಡ್ದವ್ರು ತರಾ ಜಗ್ಳಾ ಮಾಡ್ತಿರಾ” ಅಂತ ಕೂಗಿದಳು.

ಅವತ್ತಿನ ಅವಳ ಮಾತಗಳಲ್ಲಿ ಹಲವಾರು ಸತ್ಯಾಂಶ ಅಡಗಿತ್ತು.

ಆನಂದ ಸೊತಿದ್ದಾ, ಮನೇಲಿ ಅಪ್ಪ ಅಮ್ಮಾ, ಅವನ ಕೂಗಿಗೆ ಒಡದ್ದೆ, science ಅಲ್ಲಿ marks score ಮಾಡುವ ಜವಾಬ್ದಾರಿಯನ್ನು ಹೇರಿಸಿದ್ದರು. ದಿನಾ ರಾತ್ರೆ ಬೀದಿಯಾ ಮನೆಯವರೆಲ್ಲಾ ತಮ್ಮ ಯೆಲ್ಲಾ ವಸ್ತುಗಳಿಗೆ double lock ಹಾಕಿ, ಕಟ್ಟೇ ಹತ್ತಿರ ನೋಡಿ ಶಾಪ ಒಂದಷ್ಟನ್ನು ಹಾಕಿ ಮನೆಯೊಳಗೆ ಹೊಗಿ ಬಾಗ್ಲ್ನನ್ನು ಗಟ್ಟಿಯಾಗಿ ಹಾಕಿಕೊಳುತ್ತಿದ್ದರೂ.

ಅವತ್ತೊಮ್ಮೆ ಜೊರಾಗಿ ಮಳೆ ಬರ್ತಿತ್ತು, ಬೆಂಗಳೂರು ಉಕ್ಕಿ ಹರಿತಿತ್ತು, ಜನ್ರಿಗೆ swimming pool ಓ ಅಥ್ವಾ road ಓ ಅನ್ನೊ confusion ಅಲ್ಲಿ ಮನೆ ಸೇರ್ತಿವೊ ಅನ್ನೊ tension ಅಲ್ಲಿ ತಮ್ಮ ಗಾಡೀಯನ್ನು road, footpath ಅಂತ ನೋಡ್ದೆ ನುಗ್ಗಿಸಿ ಪೊಲಿಸ ರ ವಿಶ್ವಾಸಕ್ಕೆ ಪಾತ್ರರಾದರು.

ಆನಂದ school ಬಿಟ್ಟೀದ್ ತಕ್ಶ್ನ ಛತ್ರಿ ಹಿಡಿದು ಅಮ್ಮನ ಕೈಯನ್ನು ಬಿಡೀಸುಕೊಂಡೂ ಮನೆಹತ್ತ್ರಾ ಓಡಿದನು, ಅವ್ನಿಗೆ ಇಂತಹ ಮೆಳೆಲೂ ಆ ಕಟ್ಟೇ ಮನುಶ್ಯ ಏನ್ ಮಾಡ್ತಿರ್ ಬಹುದು ಅನ್ನೋದೇ ಪ್ರಶ್ನೇ ಆಗಿತ್ತೂ, “ಮಲಗಿರ್ಬಹುದಾ ಅಥವಾ ಎದ್ದು ಓಡಿ ತನ್ನ ಮನೆಯ portico ಹತ್ತಿರಾ ಕೂತಿರ್ಬಹುದಾ? tent ಹಾಕೊಂಡಿರ್ಬಹುದಾ?” ಹಲವಾರು ಪ್ರಶ್ನೆಗಳು ಕಾಡುತಿತ್ವು. ಮನೆ ಹತ್ತಿರ ಬಂದು ನೊಡಿದಾಗ “ಕಟ್ಟೆ ಮನುಶ್ಯ ಅದೇ ಜಾಗದಲ್ಲಿ ನೆನೆದು ಅಲ್ಲಾಡದೆ ಕುಳಿತಿದ್ದಾ..” ಜೊರಗಿ ಮಳೆ ಚೆಚುತಿತ್ತು, ಮಳೆ ಅರಳಿ ಮರದ ನೆರಳನ್ನು ದಾಟಿ rocket ನಾ ವೇಗದಲ್ಲಿ ಆ ಮನುಶ್ಯನ ಮೈ ಮೆಲೆ ಹೊಡೆಯುತ್ತಿತ್ತು. 13th cross ನಾ ಯಾವ ಮನೆಯವ್ರು ಆಚೆ ಬಂದೂ ಅವನಿಗೆ ಕನಿಕರ ತೊರಿಸೊ ಪ್ರಯತ್ನ ಮಾಡಲಿಲ್ಲಾ,

“ನಡೀ ಒಳಗೆ.. ನೀನೂ ನೆನಿತಿಯಾ” ಅಂತ ಸಿಡುಕಿ ಅಮ್ಮಾ ಆನಂದನ್ನ್ನು ಒಳಗೆ ದಬ್ಬಿದ್ದರೂ.. ರಾತ್ರೆ ಪೂರ್ತಿ ಮಳೆ, 12th cross ನಲ್ಲಿ transformer burst ಆಗಿ current ಹೋಯ್ತು, 13th cross ನ ಕೆಲವು ಮನೆಗಳಲ್ಲಿ UPS ಇದ್ದೂ ೩ ಗಂಟೆಗಳಾದ್ಮೇಲೆ battery charge ಮುಗ್ದೊಗಿ candle ಹಚ್ಚಿದ್ದ್ರು, ಮಳೆ ಕಡಿಮೆಯಾಗೋ chance ಏ ಇರ್ಲಿಲ್ಲಾ,

“ಅವ್ನು ನೆನಿತ್ತಿದಾನೆ?” ಅಂತ ಪಿಸಿಗುಟ್ಟಿದ ಆನಂದ..

“ಬಿದ್ಕೊ..” ಅಂತ ಗದರಿದರು ಆನಂದನ ಅಪ್ಪಾ..

“ಅವ್ನಿಗೆ ಸೀತಾ ಆದ್ರೆ?” ಮತ್ತೆ ಪಿಸಿಗುಟ್ಟಿದ ಆನಂದ..

ಅಷ್ಟ್ರಲ್ಲಿ ತಂದೆಯ ಗೊರಕೆ sound ಕೇಳಿ ಇನ್ನೇನು ಪ್ರಯೊಜನವಿಲ್ಲವೆಂದು ಕಣ ಬಿಡುತ್ತಾ fan ಕಡೇ ನೊಡುತ್ತಾ ಮಲಗಿದ. ಸುಮಾರು ರಾತ್ರೆ ೨:೩೦ ಗೇ “ದಡಂ” ಅಂತ ಜೊರಾಗಿ sound ಕೇಳಿಸಿತ್ತು..  ಘಾಬ್ರಿಯಿಂದ ಆನಂದನ ತಂದೆ ಎದ್ದು..

“ಯಾರದು… ಯಾರು? ನೀನಾ?”ಅಂತ ಕಿರಿಚಿದರು..

ಆನಂದನಿಗೆ ಎಚ್ಚರವಾಗಿ ಭಯದಿಂದ ನಡುಗುತ್ತಿದ್ದಾ?

ಆತಂಕದಿಂದ “ಯೇನಾಯ್ತು? ಅವ್ನಾ, ಅಪ್ಪಾ ಎಲ್ಲಿ.. current ಬಂತಾ” ಅಂತ ಪ್ರಶ್ನೆ ಮೇಲೆ ಪ್ರಶ್ನೆ ಎಸದ

ಶಬ್ದ ಕೇಳಿ 13th cross ನಾ ಎಲ್ಲರೂ ಎದ್ದು.. “ಯೇನದು ಅಂತ ಕಿಡಿಕಿಇಂದಲೇ discussion ಶುರು ಮಾಡದ್ರೂ, ಮಳೆ ಇನ್ನೂ ಜೊರಗಿ ಸುರಿತ್ತಿತ್ತೂ, current ಹೊಗಿ ಎಲ್ಲಾ ಕಡೇ ಕತ್ತಲ್ಲೂ, ಈ ಕತ್ತಲಲ್ಲಿ ಆಚೆ ಹೊಗೊದು ಯೆಲ್ಲರಿಗೋ risk ಅಂತ decide ಮಾಡಿ ಬೆಳೆಗೆ ನೊಡೋನಾ, mostly ಇನ್ನೊಂದು transformer burst ಆಗಿರ್ಬೇಕು ಅನ್ನೊ ಊಹೆ ಮಾಡಿ ಮಲಗೋಣ ಅಂತ decide ಮಾಡದ್ರೂ.

ಬೇರೆ option ಇಲ್ದೇ ಆನಂದ ಹಾಸಿಗೆ ಹಿಡಿದ

ಕಣ್ನ ತುಂಬಾ ನಿದ್ದೆ ಇದ್ದ್ರೂ ಮನಸ್ಸಿಗೆ ಅದೇನೊ ಆತಂಕ, ಭಯ, ನೂರಾರು ಯೊಚನೆಗಳು, ಅದೂ ಅವನ ಜೇವನದ ಮರೆಯಲಾಗದ ರಾತ್ರೆಯಾಗಿತ್ತೂ. ಆನಂದ ಆ ರಾತ್ರೆ, “ಮಾರ್ನೆ ದಿನಾ ಯಾರ್ ಯೆನೆ ಆಂದ್ರೂ ನಾಳೆ ಆ ಕಟ್ಟೆ ಮನುಶ್ಯನನ್ನು ಮಾತಾಡ್ಸ್ಲೇಬೇಕು ಅಂತ ಶಪತ ಮಾಡಿ” ಕಣ್ಣ ಮುಚ್ದಾ.

ಬೆಳಗ್ಗೆ ತಟ ಅಂತ ಎದ್ದು ಕಣ್ನನ್ನು ಕೈಯಿಂದ ತೆರೆದು.. ಗಡಿಯಾರದ ಕಡೆ ನೊಡ್ದಾಗೆ ೮ ಗಂಟೆಯಾಗಿತ್ತು, “ಕಟ್ಟೆ ಮನುಶ್ಯ?” ಅಂತ ಮನಸ್ಸಿನಲ್ಲಿ ಕೋಗಿ bedroom ಇಂದ ಹೊರಗೆ ಓಡಿದ, ಮಳೆ ನಿಂತು ಸೂರ್ಯ ಪ್ರಕಾಶಮಾನವಾಗಿ ಬೆಳಗುತ್ತಿದ್ದ, ಆನಂದ main door ಅನ್ನೂ ತೆಗೆದು ನೊಡೀದ ಕೂಡಲೆ 13th cross ನಾ ಯೆಲ್ಲಾ ಮನೆಯವರು ಮೌನವಾಗಿ ನಿಂತಿದ್ದರೂ, ಬಿಜು ಆನಂದನ ನೊಡಿ, ತನ್ನ gang leader ಹತ್ತಿರಾ ಓಡಿ

“ವಿಶಿಯ ಗೊತ್ತಾಯ್ತಾ?” ಅಂತ ಪ್ರಶ್ನಿಸಿದ್ದನು

ಕಣ್ ಕಣ್ ಬಿಡುತ್ತಾ ಅರ್ಥ ಆಗದೆ, “ಯೆನು” ಅಂತ ಕುತೂಹಲದಿಂದ ಕೇಳಿದನು ಆನಂದ

“ಹೊದಾ..” ಅಂದ ಬಿಜು..

“ಅಂದ್ರೆ?” ಮರು ಪ್ರಶ್ನಿಸಿದ್ದಾ ಅರ್ಥ್ವಾಗದ ಆನಂದ.

“ಅರಳಿ ಮರ ಮಳೆಗೆ ಕುಸಿದು ಕಟ್ಟೆ ಮೇಲೆ ಬಿದ್ದು, ಕಟ್ಟೆ ಹೊಡ್ದೊಯ್ತು”

“ಮನುಶ್ಯ?” ಬೆರೆಯೆಲ್ಲಾ ವಿವರಗಳನು side ಗೆ ತಳ್ಳಿ ಕಾತುರದಿಂದ ವಿಚಾರಿಸಿದ್ದ ಆನಂದ

“ಹೊದಾ…!” ಕಟ್ಟೆ ಹೋಡ್ದು “ಕಟ್ಟೆ ಮನುಶ್ಯ ಸತ್ತುಹೊಗಿದ್ದಾ.” ಅಂದ ಬಿಜು..

TV9, suvarna channel ಗಳಿಗೆ time pass ಆಗಿದ್ದಾ ಕಟ್ಟೆ ಇನ್ನು ಇರ್ಲಿಲ್ಲಾ, ಆಕಸ್ಮಿಕವಾಗಿ ಬಂದ ಮನುಶ್ಯನು ಇರ್ಲಿಲ್ಲಾ..

ಆನಂದನಿಗೆ ಜಗತ್ತೆ ಹೊಡ್ಢೊದಂಗಾಯ್ತು, ತನ್ನ “ಕಟ್ಟೆ” ಪ್ರಾಸಿದ್ದ್ಯವನ್ನು ಕಿತ್ತುಕೊಂಡಿದ್ದರೂ, ಆನಂದಿನಿಗೆ ಆ ಮನುಶ್ಯನ ಮೇಲೆ ಅದೇನೊ ಪ್ರೀತಿ ವಿಶ್ವಾಸ ಹುಟ್ಟಿತ್ತೂ. ತಾನು ಅವನ್ನನ್ನು ಅಡುಗೆಮನೆಯ ಕಿಡೀಯಿಂದ ನೊಡಿ ಕಳೆದ ಯೆಲ್ಲಾ ದಿನಗಳು ಕಣ್ನ್ ಮುಂದೆ ಒಂದು ಸಲಿ ಚಿತ್ರದ ಹಾಗೆ ಪ್ರಸಾರವಾಯ್ತು

“ಅಲ್ಲ ಕಂಡ್ರಿ ಇಷ್ಟೋಂದ್ ಜನ ಇದ್ದ್ರೀ, ಯಾರದ್ದ್ರೂ ಅವನ್ನಾ ಕರೆದು ಮನೆ compound ಅಲ್ಲಿ ಮಲ್ಕ್ಸೊಬಾರ್ದಾ?” ಅನ್ನೊ police ರ ಪ್ರಶ್ನೆಗೆ ದೊಡ್ಡವರು ತಲೆ ಬಾಗಿದರು ಆಷ್ಟೇ, ಪಾಪ ಅನ್ಯಯವಾಗಿ ಸತ್ತಾ.. ಅಂತ corporation ರವರು ತಮ್ಮ van ಗೇ ಅವನ bodyಯನ್ನು ತಳ್ಳಿದರೂ..

ಆನಂದನ ಕಣ್ಣಲ್ಲಿ ನೀರ್ ಇಳೀತು..ಕಟ್ಟೆ ಅಕ್ಕ ಪಕ್ಕ ಎರಡು ದೇವಾಸ್ಥಾನಗಳನ್ನು ನೋಡಿ ಅಸಹಾಯಕತೆಯಿಂದ ತನ್ನ ತೆಲೆಯನ್ನು ಬಾಗಿಸಿದಾ..

Van ಹೊರಡ್ದ್ತು, van ನಾ ಹಿಂಬಾಗ್ಲನ್ನೇ ನೊಡುತ್ತಾ “ನೆನ್ನೆನ್ನೇ ಮಾತಾಸಿದ್ದ್ರೇ…?” ಅಂತ ತನ್ನ ಮನಸ್ಸನ್ನು ದೂರಿದ ಆನಂದ..

ಅವತ್ತ್ ರಾತ್ರಿ 13th cross ನಲ್ಲಿ ಇಷ್ಟು ದಿನ ಬಿಟ್ಟೂ ಹೋದ ಕಳ್ಳತನ ಮತ್ತೆ ಪ್ರಾರಂಭಯಾಯ್ತು.

-ಅಭಿಷೇಕ್ ಅಯಂಗಾರ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s