’ವಿದೇಶದ’ ಸ್ವದೇಶಿ! ನನ್ನ ಮಿತ್ರರು…- By abhishek Iyengar


ನಮ್ಮ ಸಾಮಾಜದ ಒ೦ದು ರೂಡಾರೂಡೀ ಎ೦ದರೆ ಎಸ್.ಎಸ್.ಲ್.ಸಿ ಆದ್ಮೇಲೆ ಎ೦.ಇ.ಸ್ ಅಥವಾ ವಿಜಯಾ ಕಾಲೇಜಿಗೆ ಸೇರೋದು, ಆಮೇಲೆ ಇದ್ದೇ ಇದೆ, ನಮ್ಮ ಸಿ.ಇ.ಟಿ ಆಮೇಲೆ ಇ೦ಜಿನೀಯರಿ೦ಗ್, ೪ ವರ್ಷಗಳ ಓದಾಟ, ಅದೂ ಓದದ್ರೆ, ೪ ವರ್ಷಗಳ ತಿರುಗಾಟ, ಹುಡ್ಗೀ ಸಿಕ್ಕಿದ್ರೆ ‘Bike’ ನಲ್ಲಿ, ಇಲ್ಲಾ ಅಂದ್ರೆ ’Bus’ ನಲ್ಲಿ.

ಆಮೆಲೆ ಇದ್ದೆ ಇದಿಯಲ್ಲ ನೈಟ್ ಔಟ್ಸ್ ಮತ್ತು ಕ್ಯಾಂಪಸ್ ಇಂಟರವ್ಯು ಗಳ ಸಂಭ್ರಮ. ಇಷ್ಟಕ್ಕೆ ಮುಗ್ದಿಲ್ಲಾ ಸ್ವಾಮಿ, ಇನ್ನು ಶುರು ಆಗೋದು ನಮ್ಮ ದೇಸಿ ಹುಡಗರ ವಿದೇಶಿ ಕನಸು. ಅಮೇರಿಕಾ ದಲ್ಲಿ ಎಂ.ಸ್ ನಮ್ಮ ಸಮಾಜದ ಪ್ರೊಡತ್ವ.

ವ್ಯಕುಂಟ ಎಕಾದಶಿ ಸಾಲ್ ನಲ್ಲಿ ನಿಂತ್ಕೊಂಡು, ’ರೀ ನಮ್ಮ ಮಗಾ ನ್ಯುಯರ್ಕ್ ಕಾಲೇಜಿನಲ್ಲಿ ಎಂ.ಸ್ ಮಾಡ್ತಿದಾನ್ರಿ’ ಅಂತ ಹೇಳದ್ರೆನೇ ’ಸುಖ’, ’ಸಾಧನೆ’ನಮ್ಮ ’Parents’ ಗೇ.. ‘Break’ ಗೆ ಇಂಡಿಯಾ ಗೆ ಬಂದಾಗ’ಮಾಗಾ/ಮಗ್ಳು ಹಿ೦ತಿರುಗಿ ಬಂದಾ/ಬ೦ದ್ಲು’ ಎಂದು ‘ನಳಪಾಕವನ್ನೇ’ತಾಯಾರಿಸುವ ನಮ್ಮ ಸಮ್ಮಾಜ ಹಾಸ್ಯಮಯ..

ಇನ್ನು ನಮ್ಮ ದೇಸಿ ಹುಡುಗರು/ಹುಡಿಗಿಯರು ಏನು ಕಮ್ಮಿ ಇಲ್ಲಾ ಬಿಡಿ..

ಹೀಗೆ ದಾರಿಯಲ್ಲಿ ಅಡ್ದಾಡ್ಕೊಂಡು ಹೋಗ್ತಿರ್ ಬೇಕಾದ್ರೆ.. ನನ್ನ ಹಳೆಯ ಸ್ನೇಹಿತ ಒಬ್ಬ ಸಿಕ್ದ್ದಾ.. ‘ಏನೋ, ಏನ್ ಸಮಾಚಾರಾ.. ಆರಾಮ,ಯಾವಾಗ ಬ೦ದೆ?’ ಆಂತ ಮಾತಾಸದ್ರೆ..’, ‘ Who are you?’ ಅ೦ತ ಕೇಳ್ಬಿದೋಡೆ..’ ನಾನೇನೋ ಅವನ ಹತ್ರ ದೋಚೋಹಾಗೆ ನನ್ನನು ಕಿರುಗಣ್ಣಲ್ಲಿ ನೋಡುತ್ತಾ.. ’ಬ್ಲಡಿ ಇಂಡಿಯನ್ಸ್’ ಅಂತ ಬೈದು.. ಹೊರ್ ಟೇಹೋದಾ.. ’ಇನೂ U.S. ಗೆ ಹೋಗಿ ಒ೦ದು ವಾರ್ಷ ಆಗಿಲ್ಲಾ.. ಮರೆತು ಹೋಯ್ತಾ?’ ಹೇಳೊಷ್ತ್ರಲ್ಲಿ.. ’ಆಟೊ..” ಅಂತ ಕೂಗಿ.. ಹತ್ಕೊಂಡು.. ಓಡೋದಾ..

“ಊರಲ್ಲಿ ಹೋಗೊ ಮಾರಿ ಮೈಮೇಲೆ ಬರಸ್ಕೊಂಡ್ರಂತೆ..” ಅನ್ನೊ ಹಾಗೆ “ನನಗಿದು ಬೇಕಿತ್ತೆ?” ಅ೦ದ್ಕೊಂಡು..ಹ್ಯಾಪ್ ಮೊರೆ ಹಾಕೊಂಡು.. ಮು೦ದೂಡಿದೆ..

ಇನ್ನೂ ಸ್ವದೇಶಿ-ವಿದೇಶಿ ಹುಡಗರ/ಹುಡುಗಿಯರ ಸಹವಾಸ ನೇ ಬೇಡಾಪಾ ಅ೦ತ ಸುಮ್ಮುನ್ ಆಗೋಷ್ತರಲ್ಲಿ, ಹೇಳಿ ಕೇಳಿ “December”ಊ, ಅದರಲ್ಲೂ, ವಾರ್ಷಿಕ ರಜೆ, ಬೆಂಗಳೂರ್ ನಲ್ಲಂತೂ ಬರೀ ರಜೆಗಾಗಿ ಬ೦ದಿರುವ ಸ್ವದೇಶಿ-ವಿದೇಶಿ ಹುಡಗರ/ಹುಡುಗಿಯರ ಜಾತ್ರೆ.

ಹೀಗೆ ಒಂದ್ ದಿನ.. ಬ್ಯಾ೦ಕನ ಸಾಲ್ನಲ್ಲಿ ನಿಂತಿದ್ದೆ..

“ಏನೋ… ಅಭಿ ಅರಾಮಾ..?” ಎ೦ಬ ದ್ವನಿ ಒ೦ದು ಕೇಳಿ ಬ೦ತು…

ಯಾರಪ್ಪಾ ಅದು ಅ೦ತ ತಿರುಗಿ ನೋಡ್ದಾಗ ’ವಿದೇಶದಿಂದ ಬಂದಿದ್ದ ಒಬ್ಬ ಸ್ನೇಹಿತ. ಸದ್ದ್ಯ ಇವ್ನಾದ್ರು ಮಾತಾಸದ್ನಲ್ಲಾ ಅಂಥ ಖುಷಿ ಇಂದ

’ಏನಪ್ಪಾ, bank ಕಡೆ ಏನೋ ಕೆಲ್ಸ’? ಅ೦ಥ ಕೇಳ್ದಾಗ…

“Hey! ‘Paaas-word’ change apply ಮಾಡ್ಬೇಕು” ಅ೦ಥ ವಿದೇಷಿ ಶೈಲಿಯಲ್ಲಿ ಹೇಳ್ಬಿಡೋದೆ…? ಒಂದ್ ನಿಮ್ಶಕ್ಕೆ ಅರ್ಥ ಆಗ್ದೆ.. ನಾನು ಕಕ್ಕಾ ಬಿಕ್ಕೆ ನೋಡ್ತಾ..

“ಏನೋಪಾ..ಏನ್ ಬಾಷೆನೋ..” ಯೋಚೆಸ್ತಾ ನಿಂತೆ….ಕೂಡ್ಲೆ..

“ಅಲ್ಲಾ ಕಣ್ಲಾ, U.S ಗೆ ಹೋಗಿ, ಒ೦ದ್ ವಾರ್ಷಆಗಿಲ್ಲಾ.. ಅಷ್ತ್ ಬೇಗಾ.. accent ಆ….ಹೋದ್ ವರ್ಷ ಇದೇ ಕಟ್ಟೆ ಮೇಲಿ ಕೂತ್ಕೊಂಡು..

“ಅಲ್ಲಾ ಮಗಾ.. ಈ ‘Pausword (pass-word!)’ ಯಾಕ್ಲ ಯಾವಾಗ್ಲು ಚುಕ್ಕಿ ಅಥ್ವಾ.. ನಕ್ಷತ್ರ ನೇ ಇರತ್ತೆ.. ಅಂಥ ಕೇಳ್ದ್ವನು ನೀನು…” ಈಗ್ ನೋಡದ್ರೆ… ‘Paaas-word..’ ಅಂಥಿಯಲ್ಲಾ? ಅ೦ಥ ಕೇಳಿದಕ್ಕೆ..ಮುಖ ತಿರಿಗಿಸಿಕೊಂಡು.. ಹೊರ‍ಟೇ ಹೋಗೋದೇ….

ಅದೇನೋ ಸರೀ ಬಿಡಿ, ನಮ್ದು “ನಾಟಕ ರಂಗ..ಕ್ಷೇತ್ರ.” ಕಲೆ ಹಿರಿಮೆಯಾದ್ರು, ಉತ್ಪನ್ನ ಸ್ವಲ್ಪ ಕಡಿಮೆ ನೇ.. ಇನ್ನು, “Dollars” ನೋಡ್ದವ್ರು.. ನಮ್ಕಡೇ ಯಾಕ್ ನೋಡ್ತಾರೆ ??

’ಕಲಾಕ್ಷೇತ್ರದ’ ರಂಗ ಪ್ರಪಂಚ ನಮ್ದು.. ಇನ್ನ್ ಅದೂ ‘Braodway’ ನವ್ರಿಗೆ.. ಮುಟ್ಟೋದು ಕಷ್ಟನೇ..

ಸರೀ ಅಂತ ಸುಮ್ನೆ ಆಗಿದ್ರೆ.. “ಲೋ ಮಗಾ.. ನಾಳೆ ಅವನ ಆಗಮನ…U.S ಇಂದ.. “Party” ಇದ್ದೇ…ನಾಳೆ; ಅ೦ತ ಬ೦ದ ನನ್ನ ಗೆಳೆಯನ “Telephone call” ಗೇ ನಾನು ಬೇರೆ ವಿಧಿ ಇಲ್ದೆ ಒಪ್ಪ್ಕೊಂಡೆ..

ಮರು ದಿನಾ.. ‘party’ ಗೆ ‘Hotel ಒಂದರಲ್ಲಿ’ ಎಲ್ಲಾ ಸ್ನೇಹಿತರು ಬೇಟಿಯಾದವು..ನಮ್ಮಾ ’ವಿದೇಶಿ ಸ್ನೇಹಿತನ೦ತು.. ಗು೦ಪಿನ ಆಕರ್ಷಣೆಯೇ ಆಗಿದ್ದ..

ಕೈಯಲ್ಲಿ “apple iphone” ಇಟ್ಕೊ೦ಡು ನೋಡ್ರೊ “Mini- Computer..” ಅ೦ತ.. ಸಾರಿದ.. ಮುಟ್ಟಕ್ಕೆ ಕೈ ತೊಳ್ಕೊ೦ಡು ಬನ್ನಿ ಅ೦ಥ ಗಧಿರ್ಸಿದ್ದು.. ಆಯ್ತು.. ಏನೋಪಾ.. “Geometry-box” ನ ಹಿಡ್ಕೊ೦ಡು ’phone” ಊ ಅ೦ಥ ಆಡ್ತಿಧವ ಇವತ್ತು ಹೀಗಿದ್ದನೆಲ್ಲಾ ಅ೦ಥ ಸ೦ತೋಷನೂ ಪಟಿದ್ದು೦ಟು..

ಅಷ್ಟ್ರಲ್ಲೇ.. ನನ್ನ್ ಕಣ್ಣಿಗೆ ಬಿದ್ದದ್ದು.. ನನ್ನ ಸ್ನೇಹಿತನ ಬ್ಯಾಗು…

“ಏನೋ ಬ್ಯಾಗ್ ಪೂರ್ತಿ ಏನೊ ಇದು ‘paper’ ಊ ಅ೦ದಾಗಾ..

“Hey! tissue paper man!” ಅ೦ಥ ‘English” ಝಾಡಸ್ದಾ… “ಅಲ್ಲಿ, ಇಲ್ಲಿ ಮುಟ್ತದ್ಮೇಲೆ….ಕೈ ‘wash’ ಮಾಡ್ಕೊಳಕ್ಕೆ….” ಅ೦ತ ವಿವರಣೆಯೂ ಕೊಟ್ಟಾ..

ಅಲ್ಲಯಾ..’paper’ ಉಳ್ಸೂ ಅ೦ತ ಆ ದೇಶ್ದವ್ರು.. ಬಡ್ಕೊತಾರೆ. ನಿ ನೋಡದ್ರೆ ಕಾಡೆ ತ೦ದ್ ಇಟಿದ್ಯ ಇಲ್ಲಿ.. ಇನ್ನ್ ‘copenhagan’ ಊ ಉದ್ದಾರಾ…..ಅ೦ತ ಹೇಳೊಷ್ತ್ರಲ್ಲಿ.. ‘Bill! please” ಅ೦ತ ಖಿರುಚ್ ಬೆಡೊದೆ..

ಇನ್ನು ವಿದೇಶಿ ಮಿತ್ರರೊ೦ದಿಗೆ.. ‘car’ ನಲ್ಲ್ ಮಾತ್ರ ಕೂತ್ಕೊಳೋದು.. ಬಹಳ ‘danger’

‘oh! No lane discipline here?” ಅ೦ತ ಖಿರ್ಚಿದ ನನ್ನ ಸ್ನೇಹಿತನೊಬ್ಬನಿಗೆ.. ನಾನ್ ಹೇಳಿದ್ದು..”ಆಲ್ವೊ ಸಿಸ್ಯ.. ಹೋದ್ ವರ್ಷ.. ‘road crossing’ ಗೋಸ್ಕ್ರ ಇದ್ದ.. ’divider’ ಅನ್ನು, ‘dove’ ಮನೆಗೆ ‘U-turn’ದೂರಾ ಅ೦ತ ನೀನೆ.. ರಾತ್ರೆ ಬ೦ದು ಕೆತ್ತಿ.. ಮಾರ್ ನೇದಿನ ‘crossing’ ನಲ್ಲೇ ಹೊಸ ‘trend’ಅನ್ನು ಶುರು ಮಾಡ್ದ್ವನು ನಿನು..ಇವತ್ತು ನಿನ್ಗೆ ’lane disicipline’ ಆ, ನೋಡು ಆ ‘Divider’ ಇವತ್ತಿಗೆ ದೊಡ್ದಾಗಿ ‘Underpass’ ಏ ಆಗ್ಬಿಟ್ತಿದೇ ಅನ್ನುವಷ್ತ್ರಲ್ಲಿ ನನ್ನನು ಕಾರಿ೦ದ ಆಚೆ ಹಾಕೆ ಹೊರ್ ಟೇಬಿಟ್ರು..

ಇನ್ನೂ ಇವರ ’water bottle ಸ೦ಭ್ರಮನೋ, ’ಅದು ನಾ ತಾಳಲಾರೆ..’ಕಾವೇರಿ ನೀರು ಬೇಕು ಅ೦ತ ಇಲ್ಲಿದ್ದಾಗ ಧರಣಿ ಹೂಡ್ದವರು ಅಲ್ಲಿ೦ದ ವಾಪಸ್ಸು ಬ೦ದಾಗ ಬೇಕಿರೋದು..’bottle’ ನೀರು..

ಏನೆ ಹೇಳಿ ಅಥವಾ ಆಡ್ಕೊಳಿ…ತಮ್ಮಾ ಊರಿಗೆ ಮರಳಿ ಬರ್ ಬೇಕು ಅ೦ತ.. ಒ೦ದು ಮನಸ್ಸು ಇದಿಯಲ್ಲಾ, ಅದೇ ಅವರ ’ಸ್ವದೇಶಿ’ ಮನಸ್ಸಿನಾ..ಉದಾಹರಣೆ..

-ನಿಮ್ಮ ಪ್ರೀತಿಯ ಸ್ವದೇಶಿ ಗೇಳಯಾ.. ಅಬಿಷೇಕ ಅಯ್ಯ೦ಗಾರ್.

Advertisements

3 Comments Add yours

 1. Avinash says:

  hehehe … nice article maga … i see a lot of guys change after coming to u.s and I really liked the way u have written it.

  Like

 2. vanamala says:

  wonderful article …very nice

  Like

 3. ranga says:

  Sooper Sisya

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s