ಮೂಢನಂಬಿಕೆಗಳು(Superstitions)–ಸತ್ಯ ಅಸತ್ಯ- By Sri Harsha


ಹೋಗೊವಾಗ ಎಲ್ಲಿಗೆ ಅಂತ ಕೇಳಬಾರದು” ಇದನ್ನು ನಾವು ಎಲ್ಲರೂ ಯಾವಾಗಲಾದರು ಅಥವ ಎಲ್ಲಿಯಾದರೂ ಕೇಳೇ ಕೇಳಿರುತ್ತೇವೆ. ನಮ್ಮಲ್ಲಿ ಹಲವರು ಇದನ್ನೆಲ್ಲ ನಂಬಿದರೆ ಆಶ್ಚರ್ಯವೂ ಇಲ್ಲ. ಇಂತಹ ಹಲವಾರು ಮೂಢನಂಬಿಕೆಗಳಲ್ಲಿ ಮತ್ತೊಂದು ಪ್ರಮುಖವಾದದ್ದೆಂದರೆ, “ಬೆಕ್ಕು ಎಡದಿಂದ ಬಲಕ್ಕೆ ಹೋದರೆ, ಕೆಲಸ ಆಗುವುದಿಲ್ಲ” ಅನ್ನುವ ಮಾತು. ನನಗೆ ಇಂತಹ ಮೂಡ ನಂಬಿಕಗಳು ನಮ್ಮಜ್ಜಿಯ ಮೂಲಕ ಪರಿಚಯ ಆಗಿದ್ದು ಚಿಕ್ಕವಯಸ್ಸಿನಲ್ಲಿ.

ನಾನು ಕಾಲೇಜಿನಲ್ಲಿದ್ದಾಗ, ನನ್ನ ಜೊತೆ ಒಬ್ಬಳು ಹುಡುಗಿ ಓದುತ್ತಿದ್ದಳು. ಅವಳು ಪರೀಕ್ಷೆಯ ಇಡೀ ಎರಡು ವಾರ ಒಂದೇ ಬಟ್ಟೆ ಧರಿಸಿರುತ್ತಿದ್ದಳು. ಎಷ್ಟು ಗಬ್ಬು ನಾಥ ಬಂದರು ಸರಿಯೆ!! ಇಷ್ಟು ಸಾಲದು ಅಂತ, ನನ್ನ ಇನ್ನೊಬ್ಬ ಸ್ನೇಹಿತ ತನ್ನ ಜೇಬಿನಲ್ಲಿ ದೇವಸ್ಥಾನದಿಂದ ನಿಂಬೆಹಣ್ಣು ಮಂತ್ರಿಸಿ ಇಟ್ಟುಕೊಂಡಿರುತ್ತಿದ್ದ. ಒಂದು ಬಾರಿ, ಪರೀಕ್ಷಕರ ಕೈನಲ್ಲೂ ಸಿಕ್ಕಿಬಿದ್ದು ಪರೀಕ್ಷೆಯಿಂದಲೇ ಓಡಿಸಿಬಿಡುತ್ತಿದ್ದರು.

ಆದರೆ, ಇಂತಹ ಮೂಢ ನಂಬಿಕೆ ಹಲವು ಬಾರಿ ನಿಜವೂ ಆಗಿಬಿಡುತ್ತವೆ.ನಮ್ಮಂತಹ ಮಾಮೂಲಿ ಮನುಷ್ಯರು ಹೀಗೆ ಇವನ್ನು ನಂಬಿದರೆ, ಪ್ರಸಿದ್ಧ ವ್ಯಕ್ತಿಗಳ ಕಥೆಯೇ ಬೇರೆ. ಕೆಲವರು ತಮ್ಮ ಹೆಸರನ್ನು ವಿಚಿತ್ರವಾಗಿ ಬದಲಾಯಿಸಿಕೊಂಡರೆ, ಇನ್ನು ಕೆಲವರು ತಮ್ಮ ಮನೆಯ ನಕ್ಷೆಯನ್ನೇ ಬದಲಾಯಿಸಿಕೊಂಡುಬಿಟ್ಟಿರುತ್ತಾರೆ. ಹಲವು ಪ್ರಸಿದ್ಧ ಆಟಗಾರರು ತಮ್ಮ ಬಟ್ಟೆಯ ಮೇಲೆ ತಮಗೆ ಬೇಕಾದ ಸಂಖ್ಯ್ಗೆಗಳನ್ನು ಹಾಕಿಕೊಂಡಿರುತ್ತಾರೆ.

ಸಾಮಾನ್ಯವಾಗಿ ಇಂಥದನ್ನು ನಂಬದ ನಾನು, ಒಂದು ಬಾರಿ ರಸ್ತೆಯಲ್ಲಿ ಯಾವುದೋ ನಿಂಬೆಹಣ್ಣು ದಾಟಿಬಿಟ್ಟೆ. ಕಾಕತಾಳೀಯವೇನೋ ಅನ್ನುವ ಹಾಗೆ ಮಾರನೆಯ ದಿನವೇ ನನಗೆ ಬಂದ ಜ್ವರ ಟೈಫಾಯಿಡ್ ಆಗಿ ಮೂರು ವಾರದ ಮೇಲೇ ಬಿಟ್ಟಿದ್ದು. ಅಷ್ಟೇ ಏಕೆ, ನನಗೆ ಹುಷಾರು ತಪ್ಪಿದಾಗಲೆಲ್ಲಾ ನಮ್ಮಜ್ಜಿ ಉಪ್ಪು ನಿವಾಳಿಸಿ ಹಾಕುತ್ತಿದ್ದರು. ಇಷ್ಟಕ್ಕೇ ನನ್ನ ರೋಗ ಮಂಗ ಮಾಯವಾಗಿಬಿಡುತ್ತಿತ್ತು. ಉಪ್ಪು ನಿವಾಳಿಸುತ್ತಾರಲ್ಲ ಅನ್ನುವ ಖುಷಿಗೆ, ನನಗೆ ಹುಷಾರು ತಪ್ಪಲಿ ಅಂತ ಯಾವಾಗಲೂ ಬೇಡಿಕೊಳ್ಳುತ್ತಿದ್ದೆ. ನಮ್ಮ ಮುಂದಿನ ಪೀಳಿಗೆಗಳಲ್ಲಿ ಇವೆಲ್ಲಾ ನಂಬಿಕಗಳ ಅನುಭವವೇ ಇಲ್ಲದಿರಿವುದು ನಿಜವಾಗಿಯೂ ವಿಷಾದನೀಯ.

ಇಂತಹ ಮೂಢನಂಬಿಕೆಗಳನ್ನು ನಂಬುವ ಈಗಿನ ಕಾಲದ ಜನರು ಅದಕ್ಕೆ ವಿಜ್ನಾನದ ಬಣ್ನವನ್ನೂ ಕಟ್ಟಿರುತ್ತಾರೆ. ಕಾಗೆ ಕಾ ಕಾ ಅನ್ನುತ್ತಿದ್ದರೆ ಯಾರಾದರೂ ಮನೆಗೆ ಬರುತ್ತಾರೆ ಅನ್ನುವ ಸೂಚನೆ” ಅನ್ನುವ ನಂಬಿಕೆಯನ್ನು, ಹೌದು ಹೌದು, ಜನ ರಸ್ತೆಯಲ್ಲಿ ಬರುತ್ತಿದ್ದರೆ, ಕಾಗೆಗಳು ಹೆದರಿ ಹಿಂದಕ್ಕೆ ಹಾರಿಕೊಂಡು ಬರುತ್ತವೆ. ಅದಿಕ್ಕೆ ನಾವು ನಮ್ಮ ಮನೆಗೆ ಯಾರೋ ಬಂದರು ಅಂತ ನಂಬುತ್ತೇವೆ” ಅಂತ ಹೇಳಿ ಸಮಜಾಯಿಸಿಕೊಳ್ಳುತ್ತಾರೆ.

ಯಾವುದು ಸತ್ಯವೋ ಯಾವುದು ಅಸತ್ಯವೋ, ನನಗಂತು ವಯಕ್ತಿಕವಾಗಿ ಇನ್ನು ಸರಿಯಾಗಿ ಅರ್ಥವಾಗಿಲ್ಲ. ತಲೆ ಉಪಯೋಗಿಸಿದರೆ, ಇಂತಹ ನಂಬಿಕೆಗಳು ಮೂಢ ಅನ್ನಿಸಿದರೆ, ನಡೆದ ಹಾಗು ನಡೆಯುತ್ತಿರುವ ಘಟನೆಗಳನ್ನು ನೆನೆಸಿಕೊಂಡರೆ ಮಾತ್ರ ಇಂತಹ ನಂಬಿಕೆಗಳಲ್ಲಿ ಎಲ್ಲೋ ಒಂದು ಕಡೆ ನಿಜ ಇದೆ ಎಂದು ಅನ್ನಿಸುವುದು ನಿಜ.

4 Comments Add yours

 1. shivaleela says:

  I will be writing a huge comment on this…

  Like

 2. Pral says:

  About the practice with the salt, it does have explaination. Someone who is familiar with reiki might be able to tell more about it.

  Our ancestors believed in negative energy that surrounds us and causes illness. Reiki works on the same basic principle of negative and positive energy. There are a lot of things around you that gives you negative energy or brings in negativity around you. Salt is a cleanser to remove the negativity and thus cures you.
  Similarly, there surely must be reasons for all the customs and practices but we are not intelligent like our ancestors to understand them.

  Like

 3. saNDESH says:

  because of this i could do my homework

  Like

 4. saNDESH says:

  hahaha

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s