ಮೂಢನಂಬಿಕೆಗಳು(Superstitions)–ಸತ್ಯ ಅಸತ್ಯ- By Sri Harsha

“ಹೋಗೊವಾಗ ಎಲ್ಲಿಗೆ ಅಂತ ಕೇಳಬಾರದು” ಇದನ್ನು ನಾವು ಎಲ್ಲರೂ ಯಾವಾಗಲಾದರು ಅಥವ ಎಲ್ಲಿಯಾದರೂ ಕೇಳೇ ಕೇಳಿರುತ್ತೇವೆ. ನಮ್ಮಲ್ಲಿ ಹಲವರು ಇದನ್ನೆಲ್ಲ ನಂಬಿದರೆ ಆಶ್ಚರ್ಯವೂ ಇಲ್ಲ. ಇಂತಹ ಹಲವಾರು ಮೂಢನಂಬಿಕೆಗಳಲ್ಲಿ ಮತ್ತೊಂದು ಪ್ರಮುಖವಾದದ್ದೆಂದರೆ, “ಬೆಕ್ಕು ಎಡದಿಂದ ಬಲಕ್ಕೆ ಹೋದರೆ, ಕೆಲಸ ಆಗುವುದಿಲ್ಲ” ಅನ್ನುವ ಮಾತು. ನನಗೆ ಇಂತಹ ಮೂಡ ನಂಬಿಕಗಳು ನಮ್ಮಜ್ಜಿಯ ಮೂಲಕ ಪರಿಚಯ ಆಗಿದ್ದು ಚಿಕ್ಕವಯಸ್ಸಿನಲ್ಲಿ. ನಾನು ಕಾಲೇಜಿನಲ್ಲಿದ್ದಾಗ, ನನ್ನ ಜೊತೆ ಒಬ್ಬಳು ಹುಡುಗಿ ಓದುತ್ತಿದ್ದಳು. ಅವಳು ಪರೀಕ್ಷೆಯ ಇಡೀ ಎರಡು ವಾರ ಒಂದೇ ಬಟ್ಟೆ ಧರಿಸಿರುತ್ತಿದ್ದಳು….