Anda Pinda Bramhaanda Part 5- Timmappa Consultancy Services

ನಮ್ಮ ಮನೆಯಲ್ಲಿ ನನ್ನನ್ನು ಬ್ರಾಹ್ಮೀ ಮಹೂರ್ತ ದಲ್ಲಿ ಎಬ್ಬಿಸುವುದಕ್ಕೆ ಕಳೆದ ೨೫ ವರ್ಷಗಳಿಂದ ಅವಿರತ ಪ್ರಯತ್ನ ನಡೆಯುತ್ತಲೇ ಬಂದಿದೆ. ಇತ್ತೀಚೆಗೆ ಅದು ಎಷ್ಟು ತಾರಕಕ್ಕೇರಿತ್ತೆಂದರೆ ನನ್ನನ್ನು almost ಮದುವೆ ಅನ್ನುವ ಖೆಡ್ಡದಲ್ಲಿ ತಳ್ಳಿ ಮಜ ನೋಡುವುದಕ್ಕೂ ನನ್ನ ಮನೆಯವರು ಮುಂದಾಗಿದ್ದರು. ಅವರ ಪ್ರಕಾರ ” ಮದುವೆ ಆದರೆ ಜವಾಬ್ದಾರಿ ಬಂದು ನಿದ್ದೆ ಕಮ್ಮಿ ಆಗುತ್ತೆ” ಅಂತ ಆದರೆ, ನನ್ನ version, ” ಮದುವೆ ಆದರೆ ತಲೆಕೆಟ್ಟು ನಿದ್ದೆ ಬರುವುದಿಲ್ಲ, ಇನ್ನು ಎಚ್ಚರ ಎಲ್ಲಿಂದ ಆಗುವುದು” ಅಂತ. ಅಬ್ಬಬ್ಬ…