AnDa PinDa BramhaanDa Part4 – Section 377


ಈ ನಡುವೆ ನಮ್ಮ ಗುರುಜಿ ಬಹಳ Sophisticated ಆಗಕ್ಕೆ ಹೊರಟಿದ್ದರು. ಯಾವುದೊ soft skills ಕಾರ್ಯಕ್ರಮಕ್ಕೆ ಬೇರೆ ಸೇರ್ಕೊಂಡಿದ್ರು. ಯಾರಾದ್ರು ಕೇಳಿದ್ರೆ, “ ಏನು ಮಾಡಕ್ಕೆ ಆಗತ್ತೆ ಸ್ವಾಮಿ, World Is Flat” ಅನ್ನುತ್ತಿದ್ದರು. Friedman ಬರಿಯುವುದು ಇವಾಗ ಸಾರ್ಥಕ. ಅದು ಸಾಲದು ಅಂತ ಅವಾಗವಾಗ ಎಲ್ಲರ ಕಣ್ಣು ತಪ್ಪಿಸಿ ಒಂದೆರಡು English ಚಲನಚಿತ್ರಗಳಿಗೂ ಹೋಗಲು ಶುರು ಮಾಡಿದ್ದರು. “ ಯಾಕ್ರಿ ನಿಮ್ಗಿದೆಲ್ಲಾ? “ ಅಂತ ಯಾರಾದರು ಕೇಳಿದರೆ “Globalization, modernization” ಅಂತೆಲ್ಲ ಏನೇನೋ ಮಣಮಣಿಸಿ ಮುಂದಿನ ಪ್ರಶ್ನೆ ಕೇಳುವ ಮುನ್ನ ಪಲಾಯನ ಮಾಡುತ್ತಿದ್ದರು.

ಇನ್ನೂ ಕೆಲವರು ಅಷ್ಟಕ್ಕೆ ಸುಮ್ಮನಿರದೆ, “ ಹಾಳಾಯಿತು!! ಅಲ್ರೀ ಗುರುಜಿ, ನೀವು ನಮ್ಮ ಸನಾತನ ಸಂಸ್ಕೃತಿ ಅಂತೆಲ್ಲಾ ತಿರುಗಾಡ್ತಿದ್ರಿ ಇವಾಗೇನ್ ಬಂದಿರೋದು?” ಅಂತಂದ್ರೆ, “ ಅಯ್ಯೋ ಯಾರು ಇಲ್ಲ ಅಂದಿದ್ದು? ಏನು ಮಾಹಾ ವ್ಯತ್ಯಾಸ ಇಲ್ಲ ಬಿಡಿ. ಅಬ್ಬಬ್ಬಾ ಅಂದ್ರೆ ಸೂರ್ಯ ಹೋಗಿ Sun ಆಗಿದೆ. ಚಂದ್ರ ಹೋಗಿ moon ಆಗಿದೆ. ಆಮೇಲೆ, ಮುಂಚೆ ಜಾತಕ ಬರೆದು ಕೊಡುತ್ತಿದ್ದೆ, ಇವಾಗ ಅದನ್ನೇ E-Mail ಮಾಡ್ತಿನಿ ಅಷ್ಟೆ. ಬೇಕಿದ್ರೆ http://www.guruji.com visit ಮಾಡಿ ಎಲ್ಲಾ ಗೊತ್ತಾಗತ್ತೆ!”. ಅಂತ ಹೇಳಿ ಜಾರಿಕೊಳ್ಳುತ್ತಿದ್ದರು.

ಇಷ್ಟಕ್ಕೆ ನಿಲ್ಲಿಸದೆ ಇತ್ತೀಚೆಗಷ್ಟೆ ಯಾವುದೋ X-Men ಅನ್ನೋ ಚಿತ್ರ ನೋಡಿದ್ದ ಗುರುಜಿ, ಅದರಲ್ಲಿ ಬರುವ ಯಾವನೊ ಬೋಡ ಗುಂಡನ ಹಾಗೆ ತಮ್ಮ ವೇಷ ಬೇರೆ ಬದಲಾಯಿಸಿಕೊಂಡಿದ್ದರು. ಅವರ ಪ್ರಕಾರ, ಅವನ ಹಾಗೆ ಅವರಿಗೂ ಬೇರೆಯವರ ಭವಿಷ್ಯ ತಿಳಿಸುವ X-gene ಇದೆಯಂತೆ. ಅದಕ್ಕೆ ತಮ್ಮ Astrology Centre ಅನ್ನು Xtrology Centre ಅಂತ ಬದಲಾಯಿಸಿಕೊಂಡಿದ್ದಾರ.ೆ

ಇಷ್ಟೆಲ್ಲಾ ಮಾಡಿದ ನಮ್ಮ ಗುರುಜಿಗೆ, ನಿಜವಾದ Globalization ಅಂದರೆ ಗೊತ್ತಾಗಿದ್ದೆ ಅವರ ಹೊಸಾ client ಒಬ್ಬನಿಂದ. ಆ ಪುಣ್ಯಾತ್ಮನೋ ಇವರನ್ನು ದೊಡ್ಡ ಶಂಕರಚಾರ್ಯರೇ ಅಂತ ಅಂದುಕೊಂಡಿದ್ದ. ಗುರುಜಿ ನಿಂತ್ಕೊ ಅಂದರೆ ನಿಂತ್ಕೊತಿನಿ, ಕೂತ್ಕೊ ಅಂದರೆ ಕೂತ್ಕೊತೀನಿ ಅಂತ ಹೇಳಿಕೊಳ್ಳುತ್ತಿದ್ದ ಮಹಾನುಭಾವ. ಯಾವಾಗಲೂ ಅವರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದ. ನಮ್ಮ ಗುರುಜಿಗೆ ಆಶ್ಚರ್ಯ!! ತನಗೆ ಅದೆಲ್ಲಿಂದ ಇಂಥ ಶಿಷ್ಯ ಸಿಗಕ್ಕೆ ಸಾಧ್ಯ ಅಂತ.

ಒಂದು ಬಾರಿ ನಮ್ಮ ಗುರುಜಿಯ ಶಿಷ್ಯ ಜೋರಾಗಿ ಗೋಳಾಡಿಕೊಂಡು ಗುರುಜಿಯ Xtrology Centre ಗೆ ಬಂದವನೆ ಅವರನ್ನು ತಬ್ಬಿಕೊಂಡು ಅಳತೊಡಗಿದ. ಮಹಾನ್ ಕರುಣಾಳುವಾದ ನಮ್ಮ ಗುರುಜಿ ಕೇಳಿದರು.”ನನಗೆ ಎಲ್ಲಾ ಗೊತ್ತಾಗುತ್ತದೆ, ಆದರೆ ನಿನ್ನ ಬಯಿಯಲ್ಲೇ ಕೇಳುವ ಆಸೆ. ಏನು ನಿನ್ನ ತೊಂದರೆ” ಅಂದರು. ಅದಕ್ಕೆ ಅವನು, “ ಗುರುಜಿ ನನಗೆ ಮದುವೆ ಆಗಿ ಆಗಲೇ ೩ ವರ್ಷ ಕಳೀತಾ ಬಂತು ಆದರೂ ನನಗೆ ಮಕ್ಕಳಾಗಿಲ್ಲ. ಏನು ಮಾಡೋದು? “ ಅಂದ. ಗುರುಜಿಗೆ ಆದ ಆನಂದ ಹೇಳತೀರದು. ಕಡೆಗೂ ಅವರಿಗೆ ತಮ್ಮ ಜ್ನಾನ ಬಂಡಾರ ತೆರೆಯಲು ಅವಕಾಶ ಸಿಕ್ಕಿತ್ತು. “ ಅಯ್ಯೋ ನಾನಿರುವಾಗ ಭಯ ಯಾಕೆ? ನೋಡು ದಿನಾ ಬೆಳಿಗ್ಗೆ ಎದ್ದ ಕೂಡಲೆ ಹಸುವಿನ ಗಂಜಲ ಸಗಣಿಗೆ ಸೇರಿಸಿ ತಿನ್ನು. ಹೀಗೆ ೬ ತಿಂಗಳು ಮಾಡು ನಿನಗೆ ಖಂಡಿತ ಮಗು ಆಗುವುದು. “ ೬ ತಿಂಗಳಲ್ಲಿ ಮಗುವೇ? ಇದು ಹೇಗೆ ಸಾಧ್ಯ ಒಂದು ೯ ತಿಂಗಳಾದರೂ ಬೇಡವೇ ಅಂತ ಕೇಳಿದ್ದಕ್ಕೆ, “ಅಯ್ಯೋ ಅನಿಷ್ಟ ಮುಂಡೇದೆ, ಹೇಳಿದ ಹಂಗೆ ಮಾಡು. ಅಲ್ಲೀ ವರೆಗು ನನಗೆ ಮುಖವೇ ತೋರಿಸಬೇಡ.” ಅಂತ ಅವನಿಗೆ ಷರತ್ತೇ ಹಾಕಿದರು.

೬ ತಿಂಗಳಾದದ್ದೇ ತಿಳಿಯಲಿಲ್ಲ. ಗುರುಜಿಯು ಶಿಷ್ಯನ ಮುಖವೇ ಕಂಡಿರಲಿಲ್ಲ. ಅವನ number, phone ನಲ್ಲಿ ಕಂಡಾಗಲೆ ಗುರುಜಿಗೆ ಅವನ ಹಾಗು ಅವನಿಗೆ ಹಾಕಿದ್ದ ಷರತ್ತಿನ ನೆನಪಾಗಿದ್ದು. ಅವರು ಗೆದ್ದಿರುವುದರಲ್ಲಿ ಸಂಶಯವೇ ಇರಲಿಲ್ಲ. “ ಹೂ ಹೇಳಪ್ಪ ಏನ್ ವಿಶೇಷ?” ಅಂತ ಕೇಳಿದೊಡನೆಯೇ ಅವನ ಉತ್ತರ, “ ಗುರುಜಿ, ಮಗು ಆಗುವುದಿರಲಿ, ಆಗುವ ಲಕ್ಷಣವೂ ಇಲ್ಲ”. ಗುರುಜಿಗೆ ಆಶ್ಚರ್ಯ. ತಾನು ಏನಾದರೂ ಲೆಖ್ಖ ಹಾಕುವುದರಲ್ಲಿ ತಪ್ಪಾಗಿದೆಯ ಅಂತ. “ಹೌದಾ ಹಿಂಗಾಗಕ್ಕೆ ಸಾಧ್ಯವೇ ಇಲ್ಲ. ಎಲ್ಲಿ ನಿನ್ನ ಹೆಂಡತಿಯ ನಕ್ಶತ್ರ, ರಾಶಿ ಮತ್ತೆ ಹೇಳು? ಅಂದ ಹಾಗೆ ಅವಳ ಹೆಸರು?” ಅಂತ ಕೇಳಿದರು.

ಅದಕ್ಕೆ ಅವರಿಗೆ ಸಿಕ್ಕ ಉತ್ತರ ಕೇಳಿ, ಗೋಮೂತ್ರದಲ್ಲಿ ಗುರುಜಿಯೇ ಸ್ನಾನ ಮಾಡುವ ಹಾಗಾಯಿತು. ಶಿಷ್ಯನ ಉತ್ತರ “ ರೋಹಿಣಿ ನಕ್ಷತ್ರ, ಕನ್ಯಾ ರಾಶಿ. ಹೆಸರು “Rohit“.

5 Comments Add yours

 1. Amit Arora says:

  can i have the English version of the same ? 🙂

  Like

  1. thoughtsunparalleled says:

   Definitely! amit we are trying our best to get the english version out! you will get it soon once the author agrees for Translation 🙂

   Like

 2. ಸುಧೀಂದ್ರ says:

  ಅಯ್ಯೊ, ಯಾರಲ್ಲಿ ದಯವಿಟ್ಟು ಈ ಬರಹದ english version ಬಂದ್ರೂ, ಮೂಲವಾದ ಕನ್ನಡ ಪ್ರತಿಯನ್ನು ಹಾಗೇ ಇರಲು ಬಿಡಿ.

  Like

 3. ಸುಧೀಂದ್ರ says:

  ಹಾಗೆ ಈ ನಮ್ಮ ಗುರೂಜಿನೆ ಇರಬೇಕು, ಈ ಮೇಲ್ಕಂಡ ವಿಚಾರ ತಮ್ಮ ಜೀವನದಲ್ಲಿ ನಡೆದಾಗ supreme court ನಲ್ಲಿ gay ಸಮುದಾಯದ ವಿರುದ್ಧ ಮೇಲ್ಮನವಿ ಸಲ್ಲಿಸಿರೋದು. ಮುಂದೇನಾಗತ್ತೋ ಕಾದು ನೋಡುವ.

  Like

 4. Nitin says:

  ಈ ಬರಹ ಬೊಂಬಾಟ್ ಆಗಿ ಇದೆ. ಇದನ್ನು ದಯವಿಟ್ಟು ಆಂಗ್ಲ ಭಾಷೆಯಲ್ಲಿ ಬರೆದು ಹಾಳು ಮಾಡಬೇಡಿ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s