AnDa, PinDa Bramhaanda – Part 1


ಘಂಟೆ ಸರಿಯಾಗಿ ೯:೦೦ ಹೊಡೆದಿತ್ತು. ನನ್ನ ನಿರರ್ಗಳವಾದ ನಿದ್ರೆಯಿಂದಾಗಿ ಅವತ್ತಿನ office ಕೆಲಸಕ್ಕೆ ಕಲ್ಲು ಬಿದ್ದಿತ್ತು. ಏನೋ ಜೋರು ಗಲಾಟೆಯಾಗಿ ನನಗೆ ಥಟ್ಟನೆ ಎಚ್ಚರವಾಗಿ ಕಣ್ಣುಜ್ಜಿಕೊಂಡು ನೋಡಿದರೆ ನಮ್ಮ ಮನೆಯ ಪೆದ್ದು ಪೆಟ್ಟಿಗೆ ಅಥವ ಪೆ.ಪೆ ಅಂದರೆ t.v ಯಲ್ಲಿ ಜೋರಾಗಿ ಒಬ್ಬ ಧಡೂತಿ ಮನುಷ್ಯ ಮಂತ್ರ ಪಠಿಸುತ್ತಿದ್ದ.. ಆ ಕಾರ್ಯಕ್ರಮವೇ “ಅಂಡ, ಪಿಂಡ, ಬ್ರಹ್ಮಾಂಡ”.

ಆ ಮನುಷ್ಯನ ಅವತಾರವೇ ಸರಿ. ಜುಬ್ಬ ಧರಿಸಿದ್ದ ಅವನು, ಕೈ ಪೂರ ಚಿನ್ನದಿಂದ ತುಂಬಿದ್ದರೆ ಹಣೆಯೆಲ್ಲ ವಿಭೂತಿಯ ಬಟ್ಟಲಾಗಿತ್ತು. ಅಂತು ಅಡಿಯಿಂದ ಮುಡಿಯವರೆಗೂ ಭಕ್ತಿ ಉಕ್ಕಿ ಹರಿಯುತ್ತಿತ್ತು. ಈ ಮನುಷ್ಯ ಕರೆ ಮಾಡಿದವರ ಭವಿಶ್ಯ ಹೇಳಿ ಅವರ ತೊಂದರೆಗಳಿಗೆ ಪರಿಹಾರವನ್ನೂ ಕೊಡುತ್ತಿದ್ದ.

ನೆನ್ನೆಯಷ್ಟೆ “appraisal” ಮುಗಿದಿದ್ದ ನನಗೆ ಮುಂದೆ ಜೀವನ ಹೆಂಗೆ ಅನ್ನುವ ಚಿಂತೆ ಬೇರೆ ಕಾಡುತ್ತಿತ್ತು. “Insecurity” ಕಾಡುತ್ತಿದ್ದ ನನಗೆ ಯಾಕೆ ಪೆ.ಪೆ ಗೆ ಈಗಲೆ ಕರೆ ಮಾಡಿ ಕೇಳಬಾರದು ಅನ್ನಿಸಿತು. ಯಾರಿಗ್ ಗೊತ್ತು ರೀ? ಮುಂದೆ ನೀನು ಮುಂದೆ ಒಬ್ಬ ದೊಡ್ಡ “P.M” ಆಗೆ ಆಗ್ತಿಯ ಅನ್ನಬಹುದು!!! ಆಗಲಿ ಬಿಡಲಿ ಮನಸ್ಸಿಗೆ ತೃಪ್ತಿಯಾದರು ಇರತ್ತೆ. ನನ್ನ ಅದೃಷ್ಟಕ್ಕೆ, ಕರೆ ಮಾಡಿದ ಕೂಡಲೆ “line” ಕೂಡ ಸಿಕ್ಕಿಬಿಟ್ಟಿತು.

“ಏನಪ್ಪ ಹೆಸರು?” “ಹರ್ಷ”. “ ಏನ್ ಮಾಡ್ಕೊಂಡಿದಿಯ?” “ಹೀಗೆ, ಒಂದು ದೊಡ್ಡ company ನಲ್ಲಿ ಸಣ್ಣ software engineer”. ಇಲ್ಲೀಗೆ ಶುರು ಅಯಿತು ನನ್ನ ಹಾಗು ಆ ಗುರುಜಿಯ ಸಂಭಾಷಣೆ.ನಂತರ,        “ ಯಾವ ರಾಶಿ, ನಕ್ಶತ್ರ, ಗೋತ್ರ” ಹೀಗೆ ಏನೇನೋ ಕೇಳಿದರು. ನಾನು ಯಾವುದನ್ನು ಬಿಡದೆ ಎಲ್ಲವನ್ನು ಹೇಳಿದೆ. ಆದರು ಮನಸ್ಸಿನಲ್ಲಿ ಒಂದು ಸಂಶಯ ಬಂತು. ಅಲ್ಲ, ಇಷ್ಟೆಲ್ಲ ಕೇಳ್ತಿದಾರಲ್ಲ, ಇವರು ಭವಿಷ್ಯವೇ ಹೇಳುತ್ತಿದ್ದಾರೋ “Resume” ಮಾಡಿ ಕೊಡುತ್ತಿದ್ದಾರೋ ಅಂತ. ಅಷ್ಟರಲ್ಲಿ “ ಏನು ತೊಂದರೆ” ಅನ್ನೊ ಬ್ರಹ್ಮ ಪ್ರಶ್ನೆ ಬಂತು. “ತೊಂದರೆಗೇನು ಗುರುಜಿ? ಬಹಳ ಇದೆ. ಆದ್ರೆ ನಾನು “office” ಗೆ ಹೋಗಕ್ಕೆ ಶುರು ಆದಾಗಿಂದ ನನಗೆ “P.M” ನ ಕಾಟ ಶುರು ಆಗಿಬಿಟ್ಟಿದೆ” ಅಂದೆ. ಹಿಂಗಂದ ಕೂಡಲೇ ಆ ಗುರುವೂ ಕಣ್ಣು ಮುಚ್ಚಿಕೊಂಡುಬಿಟ್ಟ. ಅಯ್ಯಯ್ಯೋ, ಇವನೇನಾದರು ನನ್ನ “P.M” ನ ನೆಂಟನೇ ಅನ್ನೊ ಭಯ ಬೇರೆ ಆಯಿತು. ಆಗಿದ್ದಾಗಲಿ ಇವತ್ತು ಪರಿಹಾರ ಕೇಳಲೇ ಬೇಕು ಅಂತ ನಾನು ಹಟವಾದಿಯಾದೆ.

“ನೋಡಪ್ಪ, ಏಳನೇ ಮನೆಯಲ್ಲಿ ರಾಹು ಇರೋದ್ರಿಂದ ರಾಹು ಕಾಟ ನಿನಗೆ” ಅಂತ ಕಣ್ಣುತೆರೆದು ಗುರುಗಳು ನುಡಿದರು. “ ಅಲ್ಲ ಗುರುಜಿ, ನನ್ನ “P.M” ನ ಹೆಸರು ರಾಹು ಅಲ್ಲ ರಾಹುಲ್” Full confusion ನಲ್ಲಿ ನಾನು ವಾದಕ್ಕಿಳಿದೆ. “ಥತ್ ಈಗಿನ ಕಾಲದ ಹುಡುಗರು ಮಹಾ ತಲೆಹರಟೆಗಳು. ಅಲ್ವಯ್ಯ ಮುಟ್ಟಾಳ, ನಾನು ರಾಹು ಗ್ರಹದ ಬಗ್ಗೆ ಮಾತಾದ್ತಿರದು” ಅಂತ ಕ್ಯಾಕರಿಸಿ ಉಗಿದಾಗಲೆ ನನಗೆ ಗೊತ್ತಾಗಿದ್ದು ಜ್ಯೋತಿಶ್ಯದ ಮಹಾತ್ಮೆ. ಅಲ್ಲ್ರಿ ನಾನು ಒಂದು problem ಹೇಳ್ಕೊಂಡ್ರೆ ಇವರು ಇನ್ನೊಂದು ಇದೆ ಅಂತಾರಲ್ಲ!

“ ಹೋಗ್ಲಿ ಆ ಕಾಟ ತಪ್ಪಿಸಿಕೊಳ್ಳೋದಾದ್ರು ಹೇಗೆ ಹೇಳಿ” ಅಂತ ನಾನು ತಾಳ್ಮೆಗೆಟ್ಟು ಕೇಳಿದ್ದಕ್ಕೆ,        “ ನಿಮ್ಮ office ನಲ್ಲಿ  ಒಂದು ಮಹಾ ಸುದರ್ಶನ ಹೋಮ ಆಗಬೇಕು” ಅನ್ನೊ ಪರಿಹಾರ ಹೊರಬಂತು. “ಅಲ್ರಿ ಗುರುಗಳೆ, ಅದೇನು ನನ್ನ ಅತ್ತೆಯ ಮನೆಯೆ? ಅದೇನ್ ಕಿತ್ತೋಗಿರೊ ಪರಿಹಾರ ಹೇಳ್ತಿರ್ರೀ? “ ಅಂದೇಬಿಟ್ಟೆ. ಆ ಗುರುವಿಗು ಅದೇನಾಯ್ತೊ ಗೊತ್ತಿಲ್ಲ್ಲ, “ ಅಲ್ಲಯ್ಯ ಆತರಗೆಟ್ಟವನೆ ಪೂರ್ತಿ ಕೇಳಿಸ್ಕೊಂಡು ಮಾತಡು. ಇದಕ್ಕೆ ಇನ್ನೊಂದು ಪರಿಹಾರ, ನಿಮ್ಮ ಮನೆಯ ಹೆಸರನ್ನು ರಾಹುಲ್ ನಿಲಯವೊ ಅಥವ ರಾಹುಲ್ ಪ್ರಸಾದವೊ ಅಂತ ಇಡುವುದು” ಅಂದ. ಇದು ವಾಸಿ “logical” ಉತ್ತರ. ಹಂಗೆ ಹೆಸರು ಬದಲಾಯಿಸಿ, P.M ಅನ್ನು ಮನೆಗೆ ಕರೆದು ತೋರಿಸಿದರೆ ಕಾಟ ತಪ್ಪುವುದು ಖಂಡಿತ. ಇನ್ನೇನೋ ಝ್ನಾಪಕ ಬಂದಂತೆ ಆಗಿ ಮಾತಾಡುವಷ್ಟರಲ್ಲಿ “Phone call cut” ಆಗಿತ್ತು.

೧೦ ನಿಮಷದ ನಂತರ ಹೊಳೆಯಿತು “ನನ್ನ ಹಣೆಬರಹಕ್ಕೆ ನನ್ನದು ಬಾಡಿಗೆ ಮನೆ!!!”

-sriHarsha

2 Comments Add yours

  1. Milana says:

    That Sudarshana Homa bit was hilarious 🙂 Imagine performing that in Office lol.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s