ಮೊಬೈಲಾಯಣ – Made In China- By Sri Harsha

ಇನ್ನೇನು ಸೂರ್ಯಾಸ್ಥ ಆಗ್ತಿದೆ, ಅಲೆಗಳ ಸುಮಧುರ ಶಬ್ಧ ಒ೦ದು ಕಡೆಯಾದರೆ ಅಂದವಾದ ಹುಡುಗಿಯರ ದೃಷ್ಯ ಇನ್ನೊಂದೆಡೆ. ಅರೆ ಯಾರೊ ಸುಂದರಿ ನನ್ನ ಕಡೆಗೇ ಓಡಿ ಬರುತ್ತಿದ್ದಾಳೆ.ನನ್ನನ್ನು ಅಪ್ಪಿಕೊಳ್ಳಲೇ ಇರಬೇಕು. ಹೌದು ಅವಳು ನನ್ನನ್ನೇ ನೋಡಿಕೊಂಡು ಬರುತ್ತಿದ್ದಾಳೆ, ಬಂದಳು ಬಂದಳು………………. “ರೀ, ರೀ ಎದ್ದೇಳಿ ಮೇಲೆ. ಸೋಮಾರಿಹಾಗೆ ಯಾವಾಗ್ಲು ಮಲ್ಗಿರ್ಬೇಡಿ!!! ನೋಡಿ ಮನೆಗೆ ಯಾರು ಬಂದಿದಾರೆ ಅಂತ “. ನನ್ನ ಸ್ವಪ್ನ ಸ್ವರ್ಗ ಇಲ್ಲಿಗೆ ಒಡೆದು ಬಿತ್ತು. ಥು ಕನಸಿನಲ್ಲೂ ಬೇರೆ ಹೆಂಗಸನ್ನು ನೋಡಲು ಬಿಡುವುದಿಲ್ಲ ರಾಕ್ಷಸಿ ಅಂತ…