ಕನ್ನಡ ಬರಲ್ವ?? – By Sriharsha

(ನನ್ನ ಗೆಳೆಯ ಅಭಿಷೇಕ್ ಅಯ್ಯಂಗಾರ್ ಅವರ “ಕನ್ನಡ ಬರುತ್ತ” ಎಂಬ ಅತಿ ಜನಪ್ರಿಯ ಲೇಖನ ಈ ನನ್ನ “ಕನ್ನಡ ಬರಲ್ವ??” ಕ್ಕೆ ಸ್ಪೂರ್ತಿ. “ಕನ್ನಡ ಬರುತ್ತ” ಎಂಬ ನಾಣ್ಯದ ಇನ್ನೊಂದು ಮುಖವನ್ನು ಪರಿಚಯಿಸುವುದು “ಕನ್ನಡ ಬರಲ್ವ??” ದ ಪ್ರಯತ್ನವಾಗಿದೆ. ) “ ಒಂದು ಪಾನಿ ಪುರಿ ಹಾಕಪ್ಪ” ಹೊಟ್ಟೆ ತಾಳ ಹಾಕಿ ಏನು ಸಿಕ್ಕಿದರೂ ತಿನ್ನುವ ಪರಿಸ್ಥಿತಿ ಬಂದಾಗ ನನಗೆ ಕಂಡಿದ್ದು ಬುಟ್ಟಿಯಲ್ಲಿ ಪುರಿಗಳನ್ನು ಗಲೀಜಾಗಿ ಒಂದು ಮೋರಿಯ ಮೇಲೆ ಇಟ್ಟುಕೊಂಡು ನಿಂತಿದ್ದ ಒಬ್ಬ ಹುಡುಗ. ನಾನು…